ಗೌರಿಬಿದನೂರು: ಕಳೆದ ಒಂದು ತಿಂಗಳ ಹಿಂದಿನವರೆಗೆ ಒಂದು ಕಪ್ ಕಾಫಿ ತಯಾರಿಸಲು ಸಹ ತಿಮ್ಮಕ್ಕನಿಗೆ ಒಲೆಗೆ ಊದಿ ಬೆಂಕಿ ಉರಿಸುವ ಸಾಹಸ ಮಾಡಬೇಕಿತ್ತು. ಕಳೆದ 40 ವರ್ಷಗಳಿಂದಲೂ ಆಕೆ ಒಲೆ ಊದುತ್ತಲೇ ಅಡುಗೆ ತಯಾರು ಮಾಡುತ್ತಿದ್ದಳು. ಆದರೆ ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರು ತಾಲೂಕಿನ ವ್ಯಾಚಕರಹಳ್ಳಿಯ ಇತರ 274 ಕುಟುಂಬಗಳಂತೆ ತಿಮ್ಮಕ್ಕನ ಮನೆಗೂ ಎಲ್ಪಿಜಿ ಅಳವಡಿಸಲಾಗಿದೆ.
ಬೆಂಗಳೂರಿನ 77 ಕಿ.ಮೀ. ದೂರದ ವ್ಯಾಚಕರಹಳ್ಳಿಯ ಎಲ್ಲಾ ಕುಟುಂಬಗಳು ಈಗ ಎಲ್ಪಿಜಿ ಹೊಂದಿರುವುದರಿಂದ ಉರುವಲು ಸಹಾಯದಿಂದ ಅಡುಗೆ ಮಾಡುವ ಕಾಲ ಹೊರಟು ಹೋಗಿದೆ. ಉರುವಲಿನ ಸಹಾಯದ ಬದಲು ಎಲ್ಪಿಜಿಗೆ ಪರಿವರ್ತನೆ ಕಂಡಿರುವ ಕಾರಣ ಕೇಂದ್ರ ಇಂಧನ ಸಚಿವಾಲಯ ಈ ಗ್ರಾಮವನ್ನು ಭಾರತದ ಮೊದಲ ಹೊಗೆರಹಿತ ಗ್ರಾಮವೆಂದು ಅಧಿಕೃತವಾಗಿ ಘೋಷಿಸಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ’ಮಿಷನ್ ಸ್ಮೋಕ್ಲೆಸ್ ವಿಲೇಜ್’ ಯೋಜನೆಯನ್ನು ಈ ಪ್ರದೇಶದಲ್ಲಿ ಜಾರಿಗೊಳಿಸಿತ್ತು. ಸೌದೆಯನ್ನು ಇಂಧನವಾಗಿ ಬಳಕೆ ಮಾಡಿ, ಹೊಗೆ ಮತ್ತಿತರ ಕಣಗಳನ್ನು ನಿರಂತರವಾಗಿ ಉಸಿರಾಡುವ ಕಾರಣ ಮಹಿಳೆಯರು ನ್ಯೂಮೋನಿಯಾಗೆ ತುತ್ತಾಗುತ್ತಿದ್ದಾರೆ. ಮಹಿಳೆಯರ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶ ಇದಾಗಿದೆ ಎಂದು ಐ.ಒ.ಸಿ.ಯ ಪ್ರಧಾನ ವ್ಯವಸ್ಥಾಪಕ ಮೋತಿ ಸಾಯಿ ವಾಸುದೇವನ್ ಹೇಳಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಸೌದೆಯು ಈ ಹಳ್ಳಿಯ ಮಹಿಳೆಯರ ಏಕಮಾತ್ರ ಇಂಧನ ವ್ಯವಸ್ಥೆಯಾಗಿತ್ತು. ಕಪ್ಪು ಗೋಡೆಗಳ ಅಡುಗೆಮನೆ, ಮಸಿಯಿಂದ ಕೂಡಿದ ಗಾಳಿಯ ಉಸಿರಾಟದಿಂದ ಕೆಮ್ಮು,ಉಬ್ಬಸ ಉಂಟಾಗುತ್ತಿದ್ದು, ಅಡುಗೆಯೇ ಒಂದು ಅಗ್ನಿಪರೀಕ್ಷೆ ಆಗಿತ್ತು. ಆದರೀಗ ಪರಿಸ್ಥಿತಿ ಬದಲಾಗಿದ್ದು ಹೊಗೆ ರಹಿತ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.