ರೇಡಿಯೋ ಫ್ರೀಕ್ವೆನ್ಸಿ ಮತ್ತು ವೈಯರ್ಲೆಸ್ ಆಧರಿಸಿ ಮಾನವರಹಿತ ರೈಲ್ವೆ ಕ್ರಾಸಿಂಗ್ಗಳಲ್ಲಿ ಜನರು ಮತ್ತು ರೈಲು ಚಾಲಕರಿಗೆ ಎಚ್ಚರಿಕೆ ನೀಡುವ ಧ್ವನಿ ಉತ್ಪಾದಕ ವ್ಯವಸ್ಥೆಯ ತಂತ್ರನ್ನು ಐಐಟಿ ಕಾನ್ಪುರ ತಯಾರಿಸಿದೆ. ಇದರ ಪ್ರಯೋಗ ಯಶಸ್ಸು ಕಂಡಲ್ಲಿ ಇದು ಜಾರಿಗೆ ಬರಲಿದೆ.
ಪ್ರಸ್ತುತ ಉನ್ನಾವೋ ಮತ್ತು ಸೋನಿಕ್ ರೈಲ್ವೆ ನಿಲ್ದಾಣ ಹಾಗೂ ಲಕ್ನೌ – ಸುಲ್ತಾನ್ಪುರ ವಿಭಾಗದಲ್ಲಿ ಈ ಪ್ರಯೋಗ ನಡೆಸಲಾಗುತ್ತಿದೆ. ಇದರ ಆಧಾರದಲ್ಲಿ ಐಐಟಿ ಕಾನ್ಪುರ ತನ್ನ ತಂತ್ರಜ್ಞಾನ ಉಪಕರಣವನ್ನು ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ(ಆರ್ಡಿಎಸ್ಒ)ಗೆ ಡಿ.16ರಂದು ಒಪ್ಪಿಸಲಿದೆ. ಆರ್ಡಿಡಿಒ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ರೈಲ್ವೆ ಖಾತೆ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಈ ಸಂಸ್ಥೆಯು ರೈಲ್ವೆ ನಿರ್ಮಾಣ, ಕಾರ್ಯಾಚರಣೆ, ನಿರ್ವಹಣೆಯ ವಿನ್ಯಾಸಕ್ಕೆ ಸಂಬಂಧಿಸಿದೆ. ರೈಲ್ವೆ ಉಪಕರಣಗಳ ಗುಣಮಟ್ಟ ಮತ್ತು ಸಮಸ್ಯೆಗಳ ತಾಂತ್ರಿಕ ಸಲಹೆ ನೀಡುವುದು ಈ ಸಂಸ್ಥೆಯ ಕಾರ್ಯವಾಗಿದೆ. ಎರಡು ಹಳಿಗಳಲ್ಲಿ ಸಮಾನಾಂತರವಾಗಿ ಚಲಿಸುವ ರೈಲುಗಳು ಒಂದೇ ಬಾರಿಗೆ ದಾಟುವ ಸಂದರ್ಭ ಎಚ್ಚರಿಕೆ ನೀಡುವ ಉಪಕರಣ ವ್ಯವಸ್ಥೆಯನ್ನು ತಯಾರಿಸಲು ರೈಲ್ವೆ ಇಲಾಖೆ ಐಐಟಿ ಕಾನ್ಪುರಕ್ಕೆ ಸೂಚಿಸಿದೆ.
ಈ ತಂತ್ರಜ್ಞಾನ ವ್ಯವಸ್ಥೆ ಹೆಚ್ಚಿನ ನಿರೀಕ್ಷೆ ಹೊಂದಿದೆ. 16 ರೈಲು ಹಳಿಗಳಲ್ಲಿ ಅಳವಡಿಸಿದಲ್ಲಿ 16 ರೈಲುಗಳನ್ನು ನಿಯಂತ್ರಿಸಲಿದೆ. ಜಿಪಿಎಸ್ ಮತ್ತು ರೇಡಿಯೋ ಫ್ರೀಕ್ವೆನ್ಸಿ ಗುರುತಿಸುವಿಕೆ ಟ್ಯಾಗ್(ಆರ್ಎಫ್ಐಡಿ) ವ್ಯವಸ್ಥೆಯನ್ನು ರೈಲ್ವೆ ಇಂಜಿನ್ ಮತ್ತು ರೈಲ್ವೆ ಕ್ರಾಸಿಂಗ್ಗಳಲ್ಲಿ ಅಳವಡಿಸಲಾಗುತ್ತದೆ. ರೈಲು ಮಾನವರಹಿತ ಕ್ರಾಸಿಂಗ್ನಿಂದ 1500 ಮೀಟರ್ ಹತ್ತಿರಕ್ಕೆ ಸಮೀಪಿಸುತ್ತಿದ್ದಂತೆ ಎಚ್ಚರಿಕೆ ಗಂಟೆ ಸಕ್ರಿಯಗೊಳ್ಳುತ್ತದೆ. 800 ಹಾಗೂ 50 ಮೀಟರ್ ಸಮೀಪಿಸಿದಾಗಲೂ ಮತ್ತೆ ಎಚ್ಚರಿಸುತ್ತದೆ.
ಒಂದಕ್ಕೂ ಅಧಿಕ ರೈಲುಗಳು ದಾಟಬೇಕಿದ್ದ ಸಂದರ್ಭ ಕೂಡ ಇದು ಕಾರ್ಯ ನಿರ್ವಹಿಸಲಿದೆ. ಎರಡೂ ರೈಲುಗಳು ಕ್ರಾಸಿಂಗ್ ದಾಟುವವರೆಗೆ ಇದು ಝೇಂಕರಿಸುತ್ತದೆ ಮತ್ತು ಹಲವೆಡೆ ಇದರ ಪೂರ್ವಭವಿ ಪ್ರಯಗ ಯಶಸ್ಸು ಕಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.