ಬೆಳ್ತಂಗಡಿ : ಈ ಮಣ್ಣಿನಲ್ಲಿ ಕೃಷಿ ಸಂಸ್ಕೃತಿ ಯಾವತ್ತಿನವರೆಗೆ ಜೀವಂತ ವಾಗಿರುತ್ತದೋ ಆ ತನಕ ಇಲ್ಲಿ ಕಂಬಳ ಕ್ರೀಡೆ ಕೂಡ ನಶಿಶಿ ಹೋಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ. ಗಂಗಾಧರ ಗೌಡ ಹೇಳಿದರು. ಅವರು ಬಂಗಾಡಿ ಕೊಲ್ಲಿ ನೇತ್ರಾವತಿ ನದಿ ಕಿನಾರೆಯ ಸೂರ್ಯ-ಚಂದ್ರ ಜೋಡುಕರೆ ಕಂಬಳದ 19 ನೇ ವರ್ಷದ ಕಂಬಳೋತ್ಸವವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಜಿ.ಪಂ ಸದಸ್ಯ ಶೈಲೇಶ್ ಕುಮಾರ್ ಕುರ್ತೋಡಿ, ಉಜಿರೆ ಗ್ರಾ.ಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಸುಳ್ಯ ನಗರ ಸಭೆಯ ಮಾಜಿ ಸದಸ್ಯ ಪಿ.ಎ ಮುಹಮ್ಮದ್, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬಾರಕೂರು ಶಾಂತಾರಾಮ ಶೆಟ್ಟಿ, ಗೌರವಾಧ್ಯಕ್ಷ ಗುಣಪಾಲ ಕಡಂಬ, ಸರ್ಕಲ್ ಇನ್ಸ್ಪೆಕ್ಟರ್ ಬಿ. ಆರ್ ಲಿಂಗಪ್ಪ ಪೂಜಾರಿ, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್ ಕುಲಾಲ್, ಜಾಕೆ ಸಂತೋಷ್ ಗೌಡ ಸುಳ್ಯ, ಗ್ರಾ. ಯೋಜನೆಯ ಉಜಿರೆ ವಲಯದ ಮೇಲ್ವಿಚಾರಕ ಸತೀಶ್ ಗೌಡ, ಶಶಿಕಿರಣ್ ಜೈನ್, ಸಮಿತಿ ಗೌರವಾಧ್ಯಕ್ಷ ರಂಜನ್ ಜಿ ಗೌಡ, ಅಧ್ಯಕ್ಷ ಡಾ| ಎಂ. ಎಂ ದಯಾಕರ್, ಕೋಶಾಧಿಕಾರಿ ಭರತ್ ಕುಮಾರ್, ಕಾರ್ಯದರ್ಶಿ ಕಿಶೋರ್ ಕುಮಾರ್ ವಳಂಬ್ರ, ಉಪಾಧ್ಯಕ್ಷರಾದ ಸೀತಾರಾಮ ಹಾರ್ತಕಜೆ, ತುಂಗಪ್ಪ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಎಂ. ಎ. ಕಾಸಿಂ ಮಲ್ಲಿಗೆಮನೆ, ಸ್ವಾಗತ ಸಮಿತಿ ಅಧ್ಯಕ್ಷೆ, ಗ್ರಾಮಾಭಿವೃದ್ಧಿ ಬೆಳ್ತಂಗಡಿ ಯೋಜನಾಧಿಕಾರಿ ರೂಪಾ ಜಿ ಜೈನ್, ಗ್ರಾ. ಯೋಜನೆಯ ಮೇಲ್ವಿಚಾರಕ ಸತೀಶ್ ಗೌಡ ಎಂ., ಸಮಿತಿ ಪ್ರಮುಖರಾದ ಡಿ. ದಿನೇಶ್ ಗೌಡ, ವಿನಯಚಂದ್ರ ಸೇನೆರೊಟ್ಟು, ರಾಜ್ಗೋಪಾಲ ಭಟ್ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.