ಎಸ್. ಡಿ. ಎಮ್. ಕಾಲೇಜಿನ ಬಿ.ಬಿ.ಎಮ್. ವಿದ್ಯಾರ್ಥಿ ಪ್ರವೀಣ್ಗೆ ಪರೀಕ್ಷಾ ಪ್ರವೇಶ ಪತ್ರ ನೀಡದಿರುವ ಕಾಲೇಜಿನ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ:
ಮಂಗಳೂರು : ಎಸ್.ಡಿ.ಎಮ್. ಕಾಲೇಜಿನ ಬಿ.ಬಿ.ಎಮ್. ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿ ಪ್ರವೀಣನಿಗೆ ಕಾಲೇಜು ಪರೀಕ್ಷಾ ಪ್ರವೇಶ ಪತ್ರವನ್ನು ಹಾಜರಾತಿ ಕೊರತೆ ಹಿನ್ನಲೆಯಲ್ಲಿ ನೀಡಿರುವುದಿಲ್ಲ. ವಿದ್ಯಾರ್ಥಿ ಪ್ರವೀಣಗೆ ಒಂದು ವರ್ಷದ ಹಿಂದೆ ಅಪಘಾತವಾಗಿ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾನೆ. ಇತ್ತೀಚೆಗೆ ಡಿಸೆಂಬರ್ ತಿಂಗಳಿನಲ್ಲಿ ಅಪಘಾತವಾದ ಸಂದರ್ಭದಲ್ಲಿ ಕಾಣಿಸಿಕೊಂಡ ನೋವು ಮತ್ತೆ ಪ್ರಾರಂಭವಾಗಿರುವುದರಿಂದ ಪ್ರವೀಣ ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾನೆ. ಇವನಿಗೆ ವೈದ್ಯರು 3೩ ತಿಂಗಳು ವಿಶ್ರಾಂತಿ ಮಾಡುವಂತೆ ಸೂಚಿಸಿರುತ್ತಾರೆ. ಈ ಕಾರಣದಿಂದ ವಿದ್ಯಾರ್ಥಿ ಪ್ರವೀಣ್ನಿಗೆ ಕಾಲೇಜಿಗೆ ಹೋಗಲು ಅನಾನುಕೂಲವಾಗಿ ಹಾಜರಾತಿಯಲ್ಲಿ ಕೊರತೆ ಆಗಿರುತ್ತದೆ. ಈ ವಿಷಯದ ಕುರಿತು ಆ ವಿದ್ಯಾರ್ಥಿಯು ಎಸ್.ಡಿ.ಎಮ್. ಕಾಲೇಜಿನ ಪ್ರಾಂಶುಪಾಲರಲ್ಲಿ ವಿನಂತಿ ಮಾಡಿದ್ದರು. ಆದರೂ ಇವನಿಗೆ ಪ್ರವೇಶ ಪತ್ರವನ್ನು ಪ್ರಾಚಾರ್ಯರು ನೀಡಿರುವುದಿಲ್ಲ. ಈ ವಿದ್ಯಾರ್ಥಿಗೆ ತನ್ನ ವಿಷಯವಾಗಿ ಪ್ರತಿ ತಿಂಗಳು ದಾಖಲಾಗಿರುವ ಹಾಜರಾತಿ ಮಾಹಿತಿಯನ್ನೂ ಸಹ ವಿದ್ಯಾರ್ಥಿಗೆ ನೀಡಿರುವುದಿಲ್ಲ.
ವಿವಿಯ ನಿಯಮದ ಪ್ರಕಾರ ಪ್ರತಿ ತಿಂಗಳು ವಿದ್ಯಾರ್ಥಿಯ ಹಾಜರಾತಿಯನ್ನು ಅವನ ಗಮನಕ್ಕೆ ತರಬೇಕೆಂಬ ಆದೇಶವಿದ್ದರೂ ಕಾಲೇಜಿನಲ್ಲಿ ಈ ವಿದ್ಯಾರ್ಥಿಗೆ ಶೇಕಡಾವಾರು ಹಾಜರಾತಿಯ ಪಟ್ಟಿಯನ್ನು ನೋಟೀಸ್ ಬೋರ್ಡ್ ಹಾಗೂ ವಿದ್ಯಾರ್ಥಿಯ ಪಾಲಕರಿಗೆ ತಿಳಿಸಬೇಕಿತ್ತು. ಈ ವಿಷಯವನ್ನು ತಿಳಿಸದೆ ವೈದ್ಯಕೀಯ ನಿಯಮದ ಪ್ರಕಾರ ವಿಶೇಷ ತರಗತಿಯನ್ನು ನಡೆಸಿ ವಿದ್ಯಾರ್ಥಿಗೆ ಹಾಜರಾತಿಯನ್ನು ನೀಡಬೇಕಿತ್ತು, ಪ್ರಾಚಾರ್ಯರು ತೋರಿದ ಬೇಜವಾಬ್ದಾರಿತನವನ್ನು ಪ್ರಶ್ನಿಸಿ ಪ್ರವೀಣ ಹೈಕೋರ್ಟ್ನಲ್ಲಿ ನನಗೆ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ರೀಟ್ ಅರ್ಜಿಯನ್ನು ದಿನಾಂಕ 8-4-2015 ರಂದು ದಾಖಲಿಸಿರುತ್ತಾನೆ. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಗೌರವಾನ್ವಿತ ನ್ಯಾಯಮೂರ್ತಿ ಬಿ.ವಿ. ನಾಗರತ್ನ ವಿದ್ಯಾರ್ಥಿ ಪ್ರವೀಣಗೆ ಎಪ್ರಿಲ್ 19 ರಂದು ನಡೆಯುವ ಮಂಗಳೂರು ವಿವಿಯ ದ್ವಿತೀಯ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಹಾಗೂ ಪ್ರವೇಶ ಪತ್ರವನ್ನು ನೀಡಲು ಆದೇಶವನ್ನು ನೀಡಿರುತ್ತದೆ. ಈ ಸಂದರ್ಭದಲ್ಲಿ ಎಸ್.ಡಿ.ಎಮ್. ಬಿಬಿಎಂನ ಪ್ರಾಚಾರ್ಯರಿಗೆ ಹಾಗೂ ಕುಲಸಚಿವರು (ಪರೀಕ್ಷೆ) ಮಂಗಳೂರು ವಿವಿಗೆ ನೋಟೀಸ್ ಜಾರಿ ಮಾಡಿರುತ್ತಾರೆ. ವಿದ್ಯಾರ್ಥಿ ಪ್ರವೀಣ್ ಪರವಾಗಿ ವಕೀಲರಾದ ರಾಜರಾಮ ಸೂರ್ಯಂಬೈಲು ವಾದವನ್ನು ಮಂಡಿಸಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.