ಮುಂಬಯಿ: ಮಲ್ಟಿಪ್ಲೆಕ್ಸ್ಗಳಲ್ಲಿ ಸಂಜೆ ಮರಾಠಿ ಸಿನೆಮಾಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ಮಹಾರಾಷ್ಟ್ರದ ಸರ್ಕಾರದ ಸೂಚನೆಯನ್ನು ವಿರೋಧಿಸಿದ ಬರಹಗಾರ್ತಿ ಶೋ ಡೇ ಅವರ ನಿವಾಸದ ಮುಂದೆ ಗುರುವಾರ ಶಿವಸೇನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರದ ಕ್ರಮವನ್ನು ವಿರೋಧಿಸುವ ಭರದಲ್ಲಿ ಶೋಭ ಮರಾಠಿಗರ ಆಹಾರವಾದ ವಡ ಪಾವ್ ಮತ್ತು ದಹಿ ಮಿಸಲನ್ನೂ ವ್ಯಂಗ್ಯವಾಡಿದ್ದರು. ಇದು ಶಿವಸೇನೆಯ ಕೆಂಗಣ್ಣಿಗೆ ಕಾರಣವಾಗಿದೆ. ಹೀಗಾಗಿ ಇಂದು ವಡ ಪಾವ್ ಹಿಡಿದುಕೊಂಡೇ ಪ್ರತಿಭಟನೆ ಶಿವಸೇನೆಯವರು ಪ್ರತಿಬಟನೆ ನಡೆಸಿದ್ದಾರೆ.
ಶೋಭ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ನಾನೊಬ್ಬಳು ಹೆಮ್ಮೆ ಮರಾಠಿಗಳು. ನಾನು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದಿದ್ದಾರೆ. ಅಲ್ಲದೇ ತನಗೆ ವಡ ಪಾವ್ ನೀಡಲು ಬಂದಿರುವ ಶಿವಸೇನೆ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ್ದಾರೆ.
ಮುಂಜಾಗೃತ ಕ್ರಮವಾಗಿ ಶೋಭ ಅವರ ಮನೆ ಮುಂದೆ ಬ್ಯಾರಿಕೇಡ್ಗಳನ್ನು ನಿರ್ಮಿಸಿ ಯಾವುದೇ ಅನಾಹುತವಾಗದಂತೆ ಪೊಲೀಸರು ನಿಗಾವಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.