ಪುತ್ತೂರು : ತಾಲೂಕು ಮಟ್ಟದ ಯುವಜನ ಮೇಳ ಡಿ.26 ರಂದು ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿದ್ದು, ರಾತ್ರಿ 8ರಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸವಾಲು- 2015 ನಡೆಯಲಿದೆ ಎಂದು ತಾಲೂಕು ಯುವಜನ ಒಕ್ಕೂಟ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸ್ವಚ್ಛ ಭಾರತ್, ಆರೋಗ್ಯ ಸ್ವಾಸ್ಥೃ ಪರಿಕಲ್ಪನೆಯಲ್ಲಿ ನಾಟಕ, ಬೀದಿನಾಟಕ, ಯಕ್ಷಗಾನ ಕಲೆಗಳ ಸ್ಪರ್ಧೆ ನಡೆಯಲಿದೆ. ಇದೇ ಸಂದರ್ಭ ರಾಜ್ಯಮಟ್ಟದ ಮುಕ್ತ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಮಧ್ಯಾಹ್ನ 2 ರಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ತಾಲೂಕಿನ ಅತ್ಯುತ್ತಮ ಯುವಸಂಸ್ಥೆ ಪ್ರಶಸ್ತಿ ನೀಡಲಾಗುವುದು. ತಾಲೂಕು ಮಟ್ಟದ ಅತ್ಯುತ್ತಮ ಯುವಪ್ರಶಸ್ತಿ ನೀಡಿ ಗೌರವಿಸಲಾಗುವುದು. ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಧವ ಬಿ.ಕೆ. ಅವರನ್ನು ಸನ್ಮಾನಿಸಲಾಗುವುದು. ರಾಜ್ಯ ಯುವಜನ ಮೇಳ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಗುರುಪ್ರಿಯಾ ನಾಯಕ್, ಸವಣೂರು ಯುವಕ ಮಂಡಲವನ್ನು ಅಭಿನಂದಿಸಲಾಗುವುದು.
ಸಾಧಕರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಹೇಳಿದರು.ಸವಾಲು 2015 ಕಾರ್ಯಕ್ರಮಕ್ಕೆ ಅಧಿಕೃತ ಯುವಕ- ಯುವತಿ ಮಂಡಲಗಳು, ಕಾಲೇಜು ವಿದ್ಯಾರ್ಥಿಗಳು, ಕಲಾ ಸಂಸ್ಥೆಗಳು ಭಾಗವಹಿಸಬಹುದು. ಸಮಯ 30 ನಿಮಿಷ. ಮೊದಲು ಪ್ರವೇಶ ಪಡೆದ ೮ ತಂಡಗಳಿಗೆ ಅವಕಾಶ. ಪ್ರಥಮ ಬಹುಮಾನ 10 ಸಾವಿರ ರೂ, ದ್ವಿತೀಯ 5 ಸಾವಿರ ರೂ. ಹಾಗೂ ಶಾಶ್ವತ ಫಲಕ ನೀಡಲಾಗುವುದು. ವೇಷ ಭೂಷಣ ಮತ್ತು ಇತರ ಪರಿಕರಗಳನ್ನು ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳಬೇಕು. ಪ್ರವೇಶ ಪತ್ರ ಸಲ್ಲಿಸಬೇಕಾದ ಕೊನೆ ದಿನ ಡಿ.15 ಆಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಸುಧಾಕರ ಆರ್ಯಾಪು, ಉಪಾಧ್ಯಕ್ಷ ದಿನೇಶ್ ಮೆದು, ಕಾರ್ಯದರ್ಶಿ ಸುಬ್ರಹ್ಮಣ್ಯ ಕರಂಬಾರು, ಖಜಾಂಜಿ ಅಬೂಬಕ್ಕರ್ ಆರ್ಲಪದವು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.