ಬೆಳ್ತಂಗಡಿ : ಈಚರ್ ಚಾಲಕನನ್ನು ತಾನು ಆರ್ಟಿಒ ಅಧಿಕಾರಿ ಹಾಗೂ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷನೆಂದು ಹೇಳಿಕೊಂಡು ರಿವಾಲ್ವರ್ ತೋರಿಸಿ ಬೆದರಿಕೆಯೊಡ್ಡಿದ ಆರೋಪದನ್ವಯ ಹಾಸನ ಜಿಲ್ಲೆಯ ಕೆಎಂಎಫ್ ಬಳಿ ನಿವಾಸಿ ದಯಾನಂದ ಎಂಬವರನ್ನು ಬೆಳ್ತಂಗಡಿ ಪೋಲಿಸರು ಸೋಮವಾರ ಬಂಧಿಸಿದ್ದಾರೆ.
ನ. 19 ರಂದು ಕುವೆಟ್ಟು ಗ್ರಾಮದ ವರಕಬೆ ಎಂಬಲ್ಲಿ ಈಚರ್ ಲಾರಿಯನ್ನು ಓವರ್ಟೇಕ್ ಮಾಡುವಾತ್ತಿದ್ದಾಗ ಈಚರ್ ಲಾರಿಗೆ ಕಾರನ್ನು ತಾಗಿಸಿ, ಬಳಿಕ ರಿವಾಲ್ವರ್ ತೋರಿಸಿ, ಅವ್ಯಾಚ ಶಬ್ದಗಳಿಂದ ನಿಂದಿಸಿ ನನ್ನನ್ನು ಬೆದರಿಸಿದ್ದಾರೆ ಎಂದು ದಯಾನಂದ ವಿರುದ್ದ ಲಾರಿ ಚಾಲಕ ಬಂಟ್ವಾಳ ಬೈಪಾಸ್ ನಿವಾಸಿ ವಿನಯ ಕುಮಾರ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ವಿನಯ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದರು.
ದಯಾನಂದ ಮತ್ತು ತಂಡ ನ. 19 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ನುಗ್ಗಿ, ಪಿಸ್ತೂಲ್ ತೋರಿಸಿ ಪೊಲೀಸರನ್ನೇ ಬೆದರಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಅದೇ ಪ್ರಕರಣದಲ್ಲಿ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿ ಹೊರಬರುತ್ತಿರುವಾಗ ಪೊಲೀಸರು ಲಾರಿ ಚಾಲಕನ ದೂರಿನನ್ವಯ ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ.
ಈತನ ಹುದ್ದೆ ಹಾಗೂ ಇತರ ವಿಷಯಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ಬೆದರಿಕೆ, ಕೊಲೆ ಯತ್ನ, ಸುಲಿಗೆ, ಶಸ್ತ್ರಾಸ್ತ್ರ ದುರುಪಯೋಗದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.