ಬೆಳ್ತಂಗಡಿ : ಪುತ್ತೂರು ತಾಲೂಕಿನ ಕಡಬ ವಲಯದ ಶ್ರೀ ಮಹಾಲಿಂಗೇಶ್ವರ ನವಜೀವನ ಸಮಿತಿಯ ಸದಸ್ಯರಾದ ಸೂರಪ್ಪ ಮೇರ ಇವರ ಇಬ್ಬರು ಮಕ್ಕಳಿಗೆ ಮೂರ್ಛೆ ರೋಗ ಮತ್ತು ಹೃದಯ ರೋಗ ಸಂಬಂಧಿ ಖಾಯಿಲೆಯಿದ್ದು, ಇವರ ಔಷಧಿ ವೆಚ್ಚಕ್ಕಾಗಿ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ರೂ.10,000/-ವನ್ನು ಸಹಾಯಧನವಾಗಿ ಮಂಜೂರು ಮಾಡಿದ್ದರು. ಈ ಸಹಾಯಧನವನ್ನು ಬೆಳ್ತಂಗಡಿಯ ವೇದಿಕೆ ಕಚೇರಿಯಲ್ಲಿ ವೇದಿಕೆ ನಿರ್ದೇಶಕ ವಿವೇಕ್ ವಿ.ಪಾಸ್ ಈ ಹಣವನ್ನು ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಸೂರಪ್ಪರ ತಂದೆ ಕರಿಯ ಮೇರ, ಮಗ ರಾಜೇಶ ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.