ಚೆನೈ : ತಮಿಳುನಾಡು ಮಳೆಯಿಂದ ತತ್ತರಿಸಿದ್ದು ಮುಖ್ಯಮಂತ್ರಿ ಜಯಲಲಿತಾ 500ಕೋಟಿ ರೂ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಸೇನೆಯು ಪರಿಹಾರ ಕಾರ್ಯಾಚರಣೆ ಮಾಡುತ್ತಿದ್ದು ತಂಬಾರಮ್ ಬಳಿಯ ಜನರನ್ನು ರಕ್ಷಣಾ ಕಾರ್ಯದ ಮೂಲಕ ಸ್ಥಳಾಂತರಿಸಲಾಗುತ್ತಿದೆ.
ಈಗಾಗಲೇ 71 ಮಂದಿ ಮೃತಪಟ್ಟಿದ್ದು ವಿದ್ಯುತ್ ಮತ್ತು ಡ್ರೈನೇಜ್ ಸಮಸ್ಯೆ ಮತ್ತು ಇತರ ಸಮಸ್ಯೆಗಳಿಂದಾಗಿ ಜನರು ತೊಂದರೆಗೀಡಾಗಿದ್ದಾರೆ.
683 ಗ್ರಾಮಗಳಲ್ಲಿ 40 ವೈದ್ಯಕೀಯ ಕ್ಯಾಂಪ್ಗಳನ್ನು ಆರಂಭಿಸಲಾಗಿದೆ. ಅಲ್ಲದೇ ಸತ್ತವರ ಕುಟುಂಬಕ್ಕೆ 2.5 ಲಕ್ಷ ಪರಿಹಾರ ಫೋಷಿಸಲಾಗಿದೆ. 70 ನಿರಾಶ್ರಿತರ ಕೇಂದ್ರಗಳಲ್ಲಿ 58000 ಜನರಿಗೆ ಪೊಟ್ಟಣಗಳ ಮೂಲಕ ಆಹಾರ ವಿತರಿಸಲಾಗುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.