ಪುತ್ತೂರು : ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಉದ್ಘಾಟನೆಯನ್ನು ಸಹಕಾರಿ ದ್ವಜಾರೋಹಣವನ್ನು ಮಾಡುವುದರ ಮುಖಾಂತರ ನೆರವೇರಿಸಲಾಯಿತು.
ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಆಡಳಿತ ಮುಖ್ಯಸ್ಥರಾದ ಪ್ರಾನ್ಸಿಸ್ ಡಿ ಸೋಜ ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ದಿವಂಗತ ವಾರಣಾಸಿ ಸುಬ್ರಾಯ ಭಟ್ ಇವರ ದೂರದರ್ಶಿತ್ವ ವಾದ ಯೋಜನೆಯ ಮೂಲಕ ಕ್ಯಾಂಪ್ಕೋ ಇವತ್ತು ಶ್ರೇಷ್ಠ ಹಾಗೂ ಮಾದರಿ ಸಹಕಾರಿ ಸಂಸ್ಥೆಯಾಗಿ ಬೆಳೆದು ನಿಂತಿದೆ ಸಾವಿರಾರು ಕೃಷಿ ಕುಟುಂಬಗಳಿಗೆ ಬೆನ್ನೆಲುಬಾಗಿ ನಿಂತು ಕೃಷಿ ಪ್ರೋತಾಹವನ್ನು ನೀಡುತ್ತಿದೆ ಎಂದರು.
ಸಹಕಾರಿ ಸಪ್ತಾಹದ ಅಂಗವಾಗಿ ಕ್ಯಾಂಪ್ಕೋ ನೌಕರರ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ “ಮೇಕ್ ಇನ್ ಇಂಡಿಯ ಥ್ರೂ ಕೋ ಓಪರೇಟಿವ್ “ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ವರ್ಧೆಯನ್ನು ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಕ್ಯಾಂಪ್ಕೋ ಎ.ಜಿ.ಎಮ್ ಕರುಣಾಕರ ಶೆಟ್ಟಿಗಾರ್, ಶ್ರೀ ಅನುಪ್ ಮ್ಯಾನೇಜರ್ ಆಡಳಿತ ಲಕ್ಷ್ಮಣ್ ಡೋಂಗ್ರೆ ,ಭದ್ರತಾ ಅಧಿಕಾರಿ ರಂಗನಾಥ್ ಬಿ.ಜಿ , ಕ್ಯಾಂಪ್ಕೋ ಉದ್ಯೋಗಸ್ಥರ ಕೋ ಓಪರೇಟಿವ್ ಸೊಸೈಟಿ ಮಂಗಳೂರು, ಕ್ಯಾಂಪ್ಕೋ ಉದ್ಯೋಗಸ್ಥರ ಗೃಹ ನಿರ್ಮಾಣ ಕೋ ಓಪರೇಟಿವ್ ಸೊಸೈಟಿ ಪುತ್ತೂರು ಹಾಗೂ ಮಂಗಳೂರು ಇದರ ನಿರ್ದೇಶಕರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.