ಪುತ್ತೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಆಶ್ರಯದಲ್ಲಿ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನ.7 ಹಾಗೂ 8 ರಂದು ಗ್ರಾಮ ಸಮಾವೇಶ ನಡೆಯಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಕಟಣೆ ತಿಳಿಸಿದೆ. ನನ್ನ ಗ್ರಾಮ – ನನ್ನ ಸಂಕಲ್ಪ ಎಂಬ ಆಶಯದೊಂದಿಗೆ ನ.7 ಹಾಗೂ 8 ರಂದು ಈ ಕಾರ್ಯಕ್ರಮವು ನಡೆಯಲಿದೆ.
ಗ್ರಾಮಗಳು ಭಾರತೀಯ ಸಮಾಜ ರಚನೆಯ ಅವಿಭಾಜ್ಯ ಅಂಗ, ಪರಸ್ಪರ ಅವಲಂಬನೆಯಿಂದ ಸ್ವಾವಲಂಬನೆಯನ್ನು ಸಾಧಿಸಿದ ಉತ್ತಮ ಪ್ರಯೋಗ. ವ್ಯಕ್ತಿ ಹಾಗೂ ಸಮುದಾಯಕ್ಕೆ ಸುಸ್ಥಿರತೆ, ಸುಭದ್ರತೆ ಹಾಗೂ ವಿಕಾಸದ ಸಹಜ ಅವಕಾಶವನ್ನು ಕಲ್ಪಿಸಿದ ಸುಂದರ ವ್ಯವಸ್ಥೆ. ನಮ್ಮ ಸಂಸ್ಕೃತಿಯ ಬೇರುಗಳು ಗ್ರಾಮಗಳಲ್ಲಿ ಆಳವಾಗಿ ಇಳಿದಿವೆ.ಆದರೆ ಇಂದು ಇಡೀ ಗ್ರಾಮವೇ ಒಂದು ಪರಿವಾರದಂತೆ ಇದ್ದ ವಾತಾವರಣ ಬದಲಾಗುತ್ತಿರುವುದು ಕಂಡುಬರುತ್ತಿದೆ.ಹೀಗಾಗಿ ಈಗ ಜಾಗೃತಿ ಅನಿವಾರ್ಯವಾಗಿದೆ.
ಈ ಮೂಲಕ ಪರಿವರ್ತನೆ ತರುವ ಹಲವಾರು ಉತ್ತಮ ಪ್ರಯತ್ನಗಳು ವ್ಯಕ್ತಿಗತವಾಗಿ, ಸಾಮೂಹಿಕವಾಗಿ ಜಿಲ್ಲೆಯ ವಿವಿದೆಡೆ ನಡೆಯುತ್ತಿದೆ. ಸಂಘದ ಗ್ರಾಮೀಣ ಶಾಖೆಗಳ ಮೂಲಕ ನಡೆದ ಪರಿವರ್ತನೆಯ ಯಶೋಗಾಥೆಗಳು ಭರವಸೆ ಮೂಡಿಸುತ್ತಿವೆ. ಈಗಾಗಲೇ ಬೆಂಗಳೂರಿನ ಜಿಗಣಿಯಲ್ಲಿ ನಡೆದ “ಗ್ರಾಮ ಸಂಗಮ”ವು ಯಶಸ್ವಿಯಾಗಿದ್ದು ಅನೇಕರಿಗೆ ಪ್ರೇರಣೆಯಾಗಿದೆ.ಮುಂದೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ವಿಕಾಸ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸುವ ದೃಷ್ಟಿಯಿಂದ 2 ದಿನಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ನ.7 ರಂದು ಸಂಜೆ ಸಮಾವೇಶ ಉದ್ಘಾಟನೆಗೊಂಡು ನ.8 ರಂದು ಸಂಜೆ ಸಮಾರೋಪಗೊಳ್ಳಲಿದ್ದು ಪ್ರತೀ ಗ್ರಾಮದಿಂದ ಕನಿಷ್ಟ 3 ಮಂದಿ ಭಾಗವಹಿಸಬೇಕು ಎಂದು ಅಪೇಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.