ನವದೆಹಲಿ : 2005ಕ್ಕಿಂತ ಮುನ್ನ ತಂದೆ ತೀರಿಕೊಂಡಿದ್ದರೆ ಅಥವಾ 2005 ರಲ್ಲಿ ಜಾರಿಯಾದ ಹಿಂದೂ ಉತ್ತರಾಧಿಕಾರ ಕಾಯ್ದೆ ತಿದ್ದುಪಡಿಗಿಂತಲೂ ಮುನ್ನ ತಂದೆ ತೀರಿಕೊಂಡಿದ್ದರೆ ಅಂತಹ ಪ್ರಕರಣಗಳಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿಂದೆ ಹಿಂದೂ ಉತ್ತಾರಾಧಿಕಾರಿ ಕಾಯಿದೆ ಪ್ರಕಾರ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಇರಲಿಲ್ಲ. ಹೆಣ್ಣು ಮಕ್ಕಳು ಹಿಂದು ಅವಿಭಕ್ತ ಕುಟುಂಬದಲ್ಲಿ ಜೀವನೋಪಾಯಕ್ಕಷ್ಟೇ ಸಹಾಯ ಕೇಳಲು ಅವಕಾಶವಿತ್ತು.
2005 ರ ತಿದ್ದುಪಡಿಯನಂತರ ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಪಡೆಯಲು ಅವಕಾಶವಿದೆ. ಮಾತ್ರವಲ್ಲ 2005 ರ ನಂತರ ಜನಸಿದ ಹೆಣ್ಣು ಮಕ್ಕಳು ಆಸ್ತಿಪಾಲು ಪಡೆಯುವ ಹಕ್ಕು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಹಿಂದೆ ಲಿಂಗ ತಾರತಮ್ಯ ತಪ್ಪಿಸುವ ಕಾರಣದಿಂದ ಈ ತಿದ್ದುಪಡಿ ಮಾಡಲಾಗಿತ್ತು ಇದಕ್ಕಾಗಿ ಬೇಡಿಕೆ ಕೇಳಿ ಬಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.