ನವದೆಹಲಿ: ನಿನ್ನೆಯಷ್ಟೇ ನನ್ನ ಕಾರು ನನಗೆ ವಾಪಾಸ್ ಕೊಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಳಿ ಅಭಿಮಾನಿಯೊಬ್ಬ ಬೇಡಿಯಿಟ್ಟಿದ್ದ, ಇದೀಗ ಮತ್ತೊಬ್ಬ ಅಭಿಮಾನಿ ಎಎಪಿಗಾಗಿ ನಾನು ಡಿಸೈನ್ ಮಾಡಿದ ಲೋಗೋವನ್ನೇ ವಾಪಾಸ್ ಕೊಡಿ ಎಂದು ಕೇಳುತ್ತಿದ್ದಾನೆ.
ಪಕ್ಷದ ಕಾರ್ಯಕರ್ತ ಸುನೀಲ್ ಲಾಲ್ ಎಂಬಾತ ಎಎಪಿ ಲೋಗೋವನ್ನು ಡಿಸೈನ್ ಮಾಡಿದ್ದು ನಾನು, ಅದು ನನ್ನ ಬೌದ್ಧಿಕ ಆಸ್ತಿ. ಹಾಗಾಗೀ ಇನ್ನು ಮುಂದೆ ಅದರ ಬಳಕೆ ಮಾಡುವುದನ್ನು ನಿಲ್ಲಿಸಿ. ಪೋಸ್ಟರ್, ಬ್ಯಾನರ್, ಬಾವುಟ ಯಾವುದರಲ್ಲೂ ಅದರ ಬಳಕೆ ಮಾಡಬೇಡಿ ಎಂದು ಎಎಪಿಗೆ ಸೂಚನೆ ನೀಡಿದ್ದಾನೆ.
ಅಲ್ಲದೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ತನ್ನ ರಾಜೀನಾಮೆಯನ್ನು ಸ್ವೀಕರಿಸಬೇಕು ಎಂದು ಹೇಳಿದ್ದಾನೆ.
ಎಎಪಿ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ನಿರೀಕ್ಷೆಯನ್ನು ತಲುಪುದರಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕುಂದನ್ ಶರ್ಮ ಅವರು ಕೇಜ್ರಿವಾಲ್ಗೆ ತಾನು ನೀಡಿದ್ದ ವ್ಯಾಗನಾರ್ ಕಾರನ್ನು ವಾಪಾಸ್ ಮಾಡುವಂತೆ ಕೇಳಿದ್ದರು.
ಒಟ್ಟಿನಲ್ಲಿ ಅಭಿಮಾನಿಗಳು ಎಎಪಿಯ ಆಂತರಿಕ ಕಿತ್ತಾಟದಿಂದ ರೋಸಿ ಹೋಗಿ ಆ ಪಕ್ಷದಿಂದ ಹೊರ ಬರಲು ಬಯಸುತ್ತಿದ್ದಾರೆ ಎಂಬುದು ಇದರಿಂದ ತಿಳಿದು ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.