ಕೊಯಂಬತ್ತೂರು: ಆಸ್ಟ್ರೇಲಿಯಾದ ತನ್ನ ಕಚೇರಿಯಲ್ಲಿ ವೃತ್ತಿ ಮಾಡುತ್ತಿದ್ದ ಈ ಇಂಜಿನಿಯರ್, ತಾನು ಜೀವನದಲ್ಲಿ ಮಾಡಬೇಕಾದದ್ದು ಇದೇನಾ ಎಂದು ತನ್ನನ್ನೇ ಪ್ರಶ್ನಿಸಿದ. ತಕ್ಷಣವೇ ಲ್ಯಾಪ್ಟಾಪ್ ಮುಚ್ಚಿ ಆಲೋಚಿಸಲು ಆರಂಭಿಸಿದ. ಏಳಂಕಿಯ ಸಂಬಳ, ಹವಾನಿಯಂತ್ರಿತ ಕಚೇರಿ ಆತನಿಗೆ ಯಾವುದೇ ರೀತಿ ಖುಷಿ, ಸಮಾಧಾನ ನೀಡಲಿಲ್ಲ. ರಜೆ ಅರ್ಜಿ ಸಲ್ಲಿಸಿ, ಕೊಯಂಬತ್ತೂರಿನ ತನ್ನ ಮನೆಗೆ ಹಿಂದಿರುಗಿದ. ಅಲ್ಲಿನ ಸಮೃದ್ಧ ಹಸಿರು ಮರಗಳನ್ನು ಕಂಡು ಕೃಷಿ ವೃತ್ತಿ ಆರಂಭಿಸಲು ನಿರ್ಧರಿಸಿದ.
ತಮಿಳುನಾಡಿನ ಕೊಯಂಬತ್ತೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ, ಇನ್ಸ್ಟಿಟೂಟ್ ಆಫ್ ಸೌತ್ ಆಸ್ಟ್ರೇಲಿಯಾದಿಂದ ಸ್ನಾನಕೋತ್ತರ ಪದವಿ ಪಡೆದು ಆಸ್ಟ್ರೇಲಿಯಾದ ಅಡಿಲೇಡ್ನಲ್ಲಿ ಕಳೆದ ೫ ವರ್ಷಗಳಿಂದ ಸಾಫ್ಟ್ವೇರ್ ಇಂಜಿನಿಯರ್ ಉದ್ಯೋಗಿಯಾಗಿದ್ದ ಓರ್ವ ಕೃಷಿಕನ ಕಥೆ ಇದು.
ಕೊಂಬತ್ತೂರಿನ ಕೃಷಿ ಕುಟುಂಬದಲ್ಲಿ ಜನಿಸಿದ ಸುರೇಶ್ ಬಾಬು ಪಾಲಣಿಸ್ವಾಮಿ, ತನ್ನ ಬಿಡುವಿನ ವೇಳೆಯಲ್ಲಿ ಅಜ್ಜ, ತಂದೆ, ತಾಯಂದಿರಿಗೆ ಕೃಷಿಯಲ್ಲಿ ಸಹಾಯಹಸ್ತನಾಗಿದ್ದರೂ ಕೃಷಿ ವೃತ್ತಿಯನ್ನೇ ಮುಂದುವರೆಸುವ ಯೋಜನೆ ಆತನಿಗಿರಲಿಲ್ಲ. ತನ್ನ ಸ್ನೇಹಿತರಂತೆ ಐಟಿ ವಿಭಾಗವನ್ನು ಆಯ್ದುಕೊಂಡ ಸುರೇಶ್, ವಿದೇಶದಲ್ಲಿ ಉದ್ಯೋಗ ಪಡೆಯುವ ಬಯಕೆಯೊಂದಿಗೆ ಆಸ್ಟ್ರೇಲಿಯಾಕ್ಕೆ ಹೋದರು ಅದು ಆತನಿಗೆ ಸಮಾಧಾನ ನೀಡಲಿಲ್ಲ.
ಸ್ಥಳೀಯ ಕೃಷಿಕರು, ಸರ್ಕಾರಿ ಕೃಷಿ ಇಲಾಖೆಯಿಂದ ಸಹಾಯ ಪಡೆದು ಕೃಷಿ ಆರಂಭಿಸಿದ್ದಾರೆ. ಅಡಿಕೆ, ಬಾಳೆ ಬೆಳೆಸುವ ಮೂಲಕ ಸಾವಯಕ ಕೃಷಿ ಆರಂಭಿಸಿದ್ದು, ತನ್ನ ತಂದೆ ನಡೆಸುತ್ತಿರುವ ಹಾಲಿನ ಡೈರಿಯಿಂದ ಗೋ ಅರ್ಕ ಹಾಗೂ ಬೇವಿನ ಎಲೆ ಉದ್ಧರಣವನ್ನು ಕೀಟನಾಶಕವನ್ನಾಗಿ ಬಳಸುತ್ತಿದ್ದಾರೆ. ನೀರಿನ ಸಂರಕ್ಷಣೆಗಾಗಿ ಹನಿ ನೀರಾವರಿ ವ್ಯವಸ್ಥೆಯನ್ನು ಮಾಡಲಾಗಿದೆ.
ಸಂಪೂರ್ಣ ಕೃಷಿಕನಾಗಿರುವ ಸುರೇಶ್ ಬಾಬು ಅವರಿಗೆ ಕೃಷಿ ವೃತ್ತಿ ಸಂತಸ ತಂದಿದ್ದು, ಇತ್ತೀಚೆಗೆ ಚೆನ್ನೈಯ ರೈತರ ಸಮೂಹದ ವತಿಯಿಂದ ’ಯುವ ರೈತ ಪ್ರಶಸ್ತಿ’ಯನ್ನು ಪಡೆದಿದ್ದಾರೆ.
ಕೃಷಿ ಒಂದು ಗೌರವಾನ್ವಿತ ವೃತ್ತಿ. ಆದ್ದರಿಂದ ಓರ್ವ ಕೃಷಿಕ ತಾನು ರೈತ ಎನ್ನಲು ಹೆಮ್ಮೆ ಪಡಬೇಕು. ಯುವ
ಜನರು ಕೃಷಿ ನಡೆಸಲು ಮನಸ್ಸು ಮಾಡಬೇಕು. ಕೃಷಿಗೆ ಹಣವು ಒಂದು ಪ್ರಮುಖ ಅಂಶವಾಗಿದೆ. ಆದ್ದರಿಂದ ಯುವ ಕೃಷಿಕರು ಸ್ವಲ್ಪ ಸಮಯ ಉದ್ಯೋಗದಲ್ಲಿದ್ದು, ಅದರಿಂದ ಬಂದ ಉಳಿತಾಯದಿಂದ ಕೃಷಿ ಆರಂಭಿಸಬೇಕು ಎಂದು ಯುವ ರೈತರಿಗೆ ಸುರೇಶ್ ಸಲಹೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.