
ನವದೆಹಲಿ: 2014ರಲ್ಲಿ ಭಾರತದ ಐದು ನಗರಗಳಲ್ಲಿ ಕೇವಲ 248 ಕಿಲೋಮೀಟರ್ಗಳಷ್ಟು ಮೆಟ್ರೋ ಮಾರ್ಗಗಳಿದ್ದವು,. ಇಂದು ದೇಶದ 26 ನಗರಗಳಲ್ಲಿ ಸುಮಾರು 1,200 ಕಿಲೋಮೀಟರ್ಗಳಷ್ಟು ಮೆಟ್ರೋ ಜಾಲವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ದೇಶದಲ್ಲಿ ಪ್ರತಿದಿನ ಒಂದು ಕೋಟಿಗೂ ಹೆಚ್ಚು ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಇದರ ಪ್ರಭಾವ ಕೇವಲ ಅಂಕಿಅಂಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಮೆಟ್ರೋ ಸೌಲಭ್ಯದಿಂದಾಗಿ ಸಂಚಾರ ದಟ್ಟಣೆಯಲ್ಲಿ ಕಳೆಯುವ ಸಮಯ ಕಡಿಮೆಯಾಗುತ್ತದೆ, ಕುಟುಂಬದೊಂದಿಗೆ ಕಳೆಯಲು ಹೆಚ್ಚು ಸಮಯ ಸಿಗುತ್ತದೆ, ಉತ್ಪಾದಕತೆ ಹೆಚ್ಚಾಗುತ್ತದೆ ಮತ್ತು ಉತ್ತಮ ಅವಕಾಶಗಳು ಲಭ್ಯವಾಗುತ್ತವೆ ಎಂದು ಅವರು ವಿವರಿಸಿದ್ದಾರೆ.
ನಗರ ಭಾರತಕ್ಕಾಗಿ ತಮ್ಮ ಸರ್ಕಾರವು ಇಂತಹ ಬದಲಾವಣೆಯನ್ನು ತರಲು ಶ್ರಮಿಸುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ. 2014ಕ್ಕೂ ಮೊದಲು ಇದ್ದ ವೇಗದಲ್ಲೇ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದ್ದರೆ, ಪುಣೆಯಂತಹ ನಗರಗಳು ಮೆಟ್ರೋಗಾಗಿ ಇನ್ನೂ ಎಷ್ಟು ಕಾಲ ಕಾಯಬೇಕಾಗುತ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ವರ್ಷಗಳಲ್ಲ, ದಶಕಗಳೇ ಬೇಕಾಗುತ್ತಿದ್ದವು ಮತ್ತು ಅಂತಹ ಪರಿಸ್ಥಿತಿ ಸ್ವೀಕಾರಾರ್ಹವಲ್ಲ ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



