News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಬರಪೀಡಿತ ಪ್ರದೇಶ ಘೋಷಿಸಲು ಲಂಚ ಬಯಸುವ ಸರಕಾರ: ಬಿ.ವೈ.ವಿಜಯೇಂದ್ರ

ಮಸ್ಕಿ: ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದ ಈ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ರೈತರನ್ನು ಮರೆತಿದೆ. ದಲಿತರನ್ನೂ ಅದು ಮರೆತಿದೆ. ಯುವಜನತೆ, ಬಡವರನ್ನೂ ಮರೆತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ.

ಪಾದಯಾತ್ರೆಯ ಎರಡನೇ ದಿನವಾದ ಇಂದು ಮಾತನಾಡಿದ ಅವರು, ಮಸ್ಕಿಯಲ್ಲಿ ಭೀಕರ ಬರ ಇದೆ. ಆದರೂ ಇದನ್ನು ಬರಪೀಡಿತ ಎಂದು ಘೋಷಿಸಿಲ್ಲ ಎಂದು ಆಕ್ಷೇಪಿಸಿದರು. ಈ ಕಾಂಗ್ರೆಸ್ ಸರಕಾರದಲ್ಲಿ ಲಂಚ ಕೊಡದಿದ್ದರೆ ಏನೂ ಆಗುವುದಿಲ್ಲ. ಮಸ್ಕಿಯ ರೈತರು 10 ಲಕ್ಷವೋ 50 ಲಕ್ಷವೋ ಲಂಚ ಕೊಟ್ಟರೆ ಮುಖ್ಯಮಂತ್ರಿಗಳು ಈ ಪ್ರದೇಶವನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಬಹುದು ಎಂದು ತಿಳಿಸಿದರು.

ಆ ಭಗವಂತನೂ ನಿಮ್ಮನ್ನು ಕ್ಷಮಿಸಲು ಸಾಧ್ಯವಿಲ್ಲ..

52 ಸಾವಿರ ಕೋಟಿ ರೂ. ಎಸ್‍ಇಪಿ, ಟಿಎಸ್‍ಪಿ ಹಣವನ್ನು ಬೇರೆ ಬೇರೆ ಇಲಾಖೆಗೆ ವರ್ಗಾಯಿಸಿದ್ದರ ಪರಿಣಾಮವಾಗಿ ದಲಿತರ ಅಭಿವೃದ್ಧಿ ಕುಂಠಿತವಾಗಿದೆ. ಯುವಕರಿಗೆ ಉದ್ಯೋಗ ಕೊಡುವ ಅವಕಾಶ ತಪ್ಪಿಹೋಗಿದೆ. ದಲಿತರಿಗೆ ಮನೆ ಕಟ್ಟುವ ಅವಕಾಶ ಇತ್ತು. ಆ ಹಣದಲ್ಲಿ ಶಿಕ್ಷಣಕ್ಕೆ ಒತ್ತು ಕೊಡಬಹುದಾಗಿತ್ತು. ಬಡವರ ಮನೆ ಬಾಗಿಲಿಗೆ ನೀರು ಕೊಡಬಹುದಾಗಿತ್ತು. ಇದ್ಯಾವುದನ್ನೂ ಮಾಡದೇ ಆ ಹಣವನ್ನು ಬೇರೆ ಇಲಾಖೆಗೆ ವರ್ಗಾಯಿಸಿದ್ದಾರೆ. ಆ ಭಗವಂತನೂ ನಿಮ್ಮನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ನುಡಿದರು.

ಬಿಜೆಪಿ ಹೋರಾಟ ಘೋಷಣೆಯಿಂದ ಆತಂಕ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಲೂಟಿ ಹೊಡೆದಿದ್ದಾರೆ. ಈ ಹಣದಲ್ಲಿ ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ಕಾಣಿಕೆ ಕೊಟ್ಟು ಅಧಿಕಾರ ನಡೆಸುತ್ತಿದ್ದ ಭ್ರಷ್ಟ ಸಚಿವರನ್ನು ಕೈಬಿಡಲು ಒತ್ತಾಯಿಸಿ ನಾವು ಪಾದಯಾತ್ರೆ ಘೋಷಿಸಿದ್ದೆವು. ಇದರಿಂದ ಮುಖ್ಯಮಂತ್ರಿಗಳಿಗೆ ಎದೆಯಲ್ಲಿ ಡವಡವ ಶುರುವಾಯಿತು ಎಂದು ಗಮನ ಸೆಳೆದರು.

ಇದೇನಾ ನಿಮ್ಮ ದಲಿತಪರ ಕಾಳಜಿ?

ಮುಖ್ಯಮಂತ್ರಿ ಕುರ್ಚಿ ಬುಡಕ್ಕೆ ಬರುವ ಆತಂಕದಿಂದ ಸಚಿವರ ರಾಜೀನಾಮೆ ಕೊಡಿಸಿದ್ದಾರೆ ಎಂದು ಆರೋಪಿಸಿದರು. ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜಣ್ಣ ಅವರು ರಾಹುಲ್ ಗಾಂಧಿ ವಿರುದ್ಧ ಮಾತನಾಡಿದರೆಂಬ ಕಾರಣಕ್ಕೆ 24 ಗಂಟೆಯಲ್ಲಿ ರಾಜೀನಾಮೆ ಪಡೆದಿರಲ್ಲವೇ ಮುಖ್ಯಮಂತ್ರಿಗಳೇ? ಇದೇನಾ ನಿಮ್ಮ ದಲಿತ ಪರ ಕಾಳಜಿ ಎಂದು ಕೇಳಿದರು.

ದಲಿತರು, ಬಡವರು, ರೈತರ ವಿರೋಧಿ ಲಜ್ಜೆಗೆಟ್ಟ ಸರಕಾರ

ದಲಿತರು, ಬಡವರು, ರೈತರ ವಿರೋಧಿ ಲಜ್ಜೆಗೆಟ್ಟ ಸರಕಾರ ಇದಾಗಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿ ಎಂದು ಜನರು ತೀರ್ಮಾನಿಸಿದ್ದಾರೆ ಎಂದ ಅವರು, ಯಡಿಯೂರಪ್ಪನವರು ಕೊಟ್ಟ ಭಾಗ್ಯಲಕ್ಷ್ಮಿ ಯೋಜನೆ, 108 ಆಂಬುಲೆನ್ಸ್ ಸೇವೆ, ದಲಿತರ ಕೇರಿಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಿಸಿದ್ದಾರೆ ಎಂದರು. ಇಂಥ ಜನವಿರೋಧಿ ಕಾಂಗ್ರೆಸ್ ಸರಕಾರವನ್ನು ಮನೆಗಟ್ಟುವ ಕೆಲಸ ಮಾಡುವಂತೆ ಮನವಿ ಮಾಡಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top