
ಡಮಾಸ್ಕಸ್‌ನ ರಾಜನದರ್ಬಾರಿನಲ್ಲಿ, ಖಲೀಫನು ಒಂದು ಮರದ ಪೆಟ್ಟಿಗೆಯನ್ನು ತೆರೆದು, ಎರಡು ಬಂಧಿತ ರಾಜಕುಮಾರಿಯರಿಗೆ ಅದರೊಳಗೆ ನೋಡಲು ಆಜ್ಞಾಪಿಸಿದ. ಅದು ಖಲೀಫನ ಅತ್ಯಂತ ಯಶಸ್ವಿ ಸೇನಾಧಿಪತಿ ಮುಹಮ್ಮದ್ ಬಿನ್ ಕಾಸಿಮ್‌ನ ಶವವಾಗಿತ್ತು. ಶವವನ್ನು ಹೋರಿಯ ಚರ್ಮದಲ್ಲಿ ಸುತ್ತಿ ಕೊಳೆತ ಸ್ಥಿತಿಯಲ್ಲಿ ಇರಿಸಲಾಗಿತ್ತು. ಖಲೀಫನು ಹೇಳಿದನು, “ನನ್ನನ್ನು ಅವಮಾನಿಸುವ ಪುರುಷರಿಗೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ”ಎಂದು.
ಆದರೆ ಈ ಘಟನೆ ಹೇಗೆ ನಡೆಯಿತು?
ಕ್ರಿ.ಶ. 712ರಲ್ಲಿ, ಸಿಂಧ್‌ನ ರಾಜಾ ದಾಹಿರ್ ಅವರನ್ನು ಅರೋರ್ ಯುದ್ಧದಲ್ಲಿ ಇಸ್ಲಾಮೀ ಆಕ್ರಮಣಕಾರ ಮುಹಮ್ಮದ್ ಬಿನ್ ಕಾಸಿಮ್ ಕೊಂದ ನಂತರ, ಅವರ ಮಕ್ಕಳಾದ ಸೂರ್ಯಾ ದೇವಿ ಮತ್ತು ಅವಳ ತಂಗಿ ಪರಿಮಳ್ ದೇವಿಯನ್ನು ಬಂಧಿಸಿ ಎಳೆದುಕೊಂಡು ಹೋಗಲಾಯಿತು. ಉಕ್ಕು, ರೇಷ್ಮೆ, ಮಸಾಲೆಗಳು, ದಂತ ಮತ್ತು ಅಮೂಲ್ಯ ರತ್ನಗಳನ್ನು ಸಾಗಿಸುತ್ತಿದ್ದ ಸಮೃದ್ಧ ರಾಜ್ಯವನ್ನು ಧ್ವಂಸಗೊಳಿಸಲಾಯಿತು. ಅವನ ಮಕ್ಕಳನ್ನು ಖಲೀಫನಿಗೆ ಉಡುಗೊರೆಯಾಗಿ ದಮಾಸ್ಕಸ್‌ಗೆ ಕಳುಹಿಸಲಾಯಿತು.
ವಿದೇಶಿ ಅರಮನೆಯಲ್ಲಿ ಸಿಲುಕಿಕೊಂಡಿದ್ದ ಸೂರ್ಯಾ ದೇವಿಯ ಬಳಿ ಉಳಿದಿದ್ದ ಏಕೈಕ ಆಯುಧವೆಂದರೆ ಅದು ಆಕೆಯ ಬುದ್ಧಿಮತ್ತೆ. ಅದನ್ನೇ ಆಕೆ ಬಳಸಿಕೊಂಡಳು. ತನ್ನ ತಂದೆಯ ದರ್ಬಾರಿನಲ್ಲಿ ರಾಜ್ಯತಂತ್ರ, ಮಿಲಿಟರಿ ವಿಜ್ಞಾನ ಮತ್ತು ವೈದಿಕ ತತ್ವಶಾಸ್ತ್ರದಲ್ಲಿ ತರಬೇತಿ ಪಡೆದಿದ್ದ ಅವಳು ಸಿಂಧ್‌ನ ಯುವರಾಣಿಯಾಗಿ ಬೆಳೆದಿದ್ದಳು. ಈಗ ಬಂಧಿತೆಯಾಗಿ, ಅವಳು ಖಲೀಫನ ವಿಶ್ವಾಸ ಮತ್ತು ನಂಬಿಕೆಯನ್ನು ಗಳಿಸಲು ಪ್ರಯತ್ನಿಸಿದಳು.
ಮುಹಮ್ಮದ್ ಬಿನ್ ಖಾಸಿಮ್ ನಮ್ಮನ್ನು ಡಮಾಸ್ಕಸ್‌ಗೆ ಕಳುಹಿಸುವ ಮೊದಲು ನಮ್ಮ ಘನತೆಗೆ ಧಕ್ಕೆ ತಂದಿದ್ದಾನೆ ಎಂದು ಈಕೆ ಖಲೀಫಾನ ಮುಂದೆ ಆರೋಪಿಸಿದಳು. ಈ ಆರೋಪವು ಲೆಕ್ಕಾಚಾರದ್ದಾಗಿತ್ತು. ಖಲೀಫನಿಗೆ ಇದು ದ್ರೋಹವಾಗಿತ್ತು. ತನ್ನ ಸೇನಾಧಿಪತಿ ತನಗೆ ಸೇರಿದ್ದನ್ನು ಅಗೌರವಿಸಿದ್ದಾನೆ ಎಂಬ ಭಾವನೆ ಆತನಿಗೆ ಮೂಡಿತು. ಕೋಪಗೊಂಡ ಖಲೀಫನು ತಕ್ಷಣ ಆಜ್ಞೆ ನೀಡಿದನು.. “ಕಾಸಿಮ್‌ನನ್ನು ಹಸಿ ಚರ್ಮದಲ್ಲಿ ಸುತ್ತಿ, ಪೆಟ್ಟಿಗೆಯಲ್ಲಿ ಮುಚ್ಚಿ ಸಾಮ್ರಾಜ್ಯದಾದ್ಯಂತ ಕಳುಹಿಸಬೇಕು”. ಆದೇಶಗಳನ್ನು ಜಾರಿಗೊಳಿಸಲಾಯಿತು. 10-12 ದಿನಗಳ ನಂತರ ಹಡಗು ತಲುಪಿದಾಗ, ಅವನ ಶವವು ಎಷ್ಟು ಕೊಳೆತಿತ್ತೆಂದರೆ ಹುಳುಗಳು ಅದನ್ನು ತಿನ್ನಲು ಪ್ರಾರಂಭಿಸಿದ್ದವು. ಒಂದು ಮಿಲಿಯನ್ ಜನರನ್ನು ಕೊಂದ, ದೇವಾಲಯ ಮತ್ತು ಖಜಾನೆಯನ್ನು ದೋಚಿದ, ಲಕ್ಷಾಂತರ ಜನರನ್ನು ಬಂಧಿಸಿದ ಮುಹಮ್ಮದ್ ಬಿನ್ ಕಾಸಿಮ್, ತನ್ನದೇ ಖಲೀಫನಿಂದ ಕೊಲ್ಲಲ್ಪಟ್ಟ.
ಅವನ ಮರಣದ ನಂತರವೇ ಸೂರ್ಯ ದೇವಿ ತನ್ನ ತಂದೆಯ ಸಾವು ಮತ್ತು ಸಿಂಧ್‌ನ ಪತನಕ್ಕೆ ಸೇಡು ತೀರಿಸಿಕೊಳ್ಳಲು ಈ ಆರೋಪವನ್ನು ಮಾಡಿದ್ದೇನೆ ಎಂದು ಬಹಿರಂಗಪಡಿಸಿದಳು.
ನಂತರ ಖಲೀಫನಿಗೆ ತಾನು ವಂಚನೆಗೊಳಗಾಗಿ, ತನ್ನ ಅತ್ಯಂತ ಯಶಸ್ವಿ ಸೇನಾಧಿಪತಿಯ ಸಾವಿಗೆ ತಾನೇ ಕಾರಣನಾದೆ ಎಂದು ಅರಿವಾಯಿತು. ಅವನು ಕೋಪದಿಂದ ಕುದಿಯುತ್ತಾ, ಇಬ್ಬರೂ ಸಹೋದರಿಯರನ್ನು ಅರಮನೆಯ ಗೋಡೆಗಳ ಒಳಗೆ ಜೀವಂತವಾಗಿ ಹೂಳಲು ಆದೇಶಿಸಿದ.
ಅವರು ತಮ್ಮ ರಾಜ್ಯವನ್ನು ಉಳಿಸಲು ಸಾಧ್ಯವಾಗಲಿಲ್ಲ. ಆದರೆ, ತಮ್ಮ ಮನೆಯನ್ನು ನಾಶಪಡಿಸಿದ ವ್ಯಕ್ತಿ ನ್ಯಾಯದಿಂದ ತಪ್ಪಿಸಿಕೊಳ್ಳದಂತೆ ಅವರು ಖಚಿತಪಡಿಸಿಕೊಂಡರು. ಸಂಪೂರ್ಣ ನಿರ್ಬಲ ಸ್ಥಿತಿಯಿಂದಲೂ ಮಾನಸಿಕ ಯುದ್ಧವನ್ನು ಮುನ್ನಡೆಸಿ ಅವರು ಸೇಡು ತೀರಿಸಿಕೊಂಡರು. ಯಾವುದೇ ಸೈನ್ಯ, ಮಿತ್ರರು ಅಥವಾ ಸ್ವಾತಂತ್ರ್ಯವಿಲ್ಲದೆಯೇ, ಅವರು ರಾಜಕೀಯ ತಂತ್ರ ಬಳಸಿ ತಮ್ಮ ಸಾಮ್ರಾಜ್ಯವನ್ನು ನಾಶಪಡಿಸಿದ ಸೇನಾಧಿಪತಿಯನ್ನು ಸ್ಮಶಾನಕ್ಕಟ್ಟಿದರು. ಕೆಲವೊಮ್ಮೆ, ಅತ್ಯಂತ ದೊಡ್ಡ ಯುದ್ಧಗಳನ್ನು ಶಸ್ತ್ರಾಸ್ತ್ರಗಳಿಂದ ಅಲ್ಲ, ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಮಾಡಲಾಗುತ್ತದೆ ಎಂಬುದಕ್ಕೆ ಅವರೇ ಉದಾಹರಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



