
ಲಕ್ನೋ: ಜಗತ್ತು ‘ಹವಾಮಾನ ಕ್ರಿಯೆ’ ಎಂಬ ಪದಗುಚ್ಛವನ್ನು ಸೃಷ್ಟಿಸುವ ಸಾವಿರಾರು ವರ್ಷಗಳ ಮೊದಲೇ, ಅಥರ್ವ ವೇದದ ಋಷಿಗಳು ಪೃಥ್ವಿ ಸೂಕ್ತದಲ್ಲಿ ಭೂಮಿ ನನ್ನ ತಾಯಿ ಮತ್ತು ನಾನು ಅವಳ ಮಗ ಎಂಬ ಸತ್ಯವನ್ನು ಪ್ರತಿಪಾದಿಸಿದ್ದರು, ನಮ್ಮ ಪಾದಗಳ ಕೆಳಗಿರುವ ಮಣ್ಣು ಶೋಷಣೆಗೆ ಒಳಪಡುವ ಸಂಪನ್ಮೂಲವಲ್ಲ, ಬದಲಾಗಿ ಸೇವೆಗೆ ಒಳಪಡಬೇಕಾದ ತಾಯಿ ಎಂದು ಬೋಧಿಸಿದ್ದರು.
ಭಾರತೀಯತೆಯಲ್ಲಿರ ಅಡಗಿರುವ ಇಂತಹ ಸಿದ್ಧಾಂತವನ್ನೇ ಅಳವಿಡಿಸಿಕೊಂಡು ಉತ್ತರಪ್ರದೇಶದಲ್ಲಿ ವೃಕ್ಷಾರೋಪಣ ಮಹಾಭಿಯಾನ ನಡೆಯುತ್ತಿದೆ.
ಲಕ್ನೋದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೃಕ್ಷಾರೋಪಣ ಮಹಾಭಿಯಾನ-2026ರ ಸಿದ್ಧತೆಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜುಲೈ 12 ರಂದು ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದಡಿಯಲ್ಲಿ, ರಾಜ್ಯಾದ್ಯಂತ ಹಬ್ಬದ ವಾತಾವರಣ ಸೃಷ್ಟಿಸಿ ಒಂದೇ ದಿನದಲ್ಲಿ 35 ಕೋಟಿ ಸಸಿಗಳನ್ನು ನೆಡುವ ಬೃಹತ್ ಮಹಾ ಯಜ್ಞವನ್ನು ಆಯೋಜಿಸಲಾಗುವುದು ಎಂದು ಘೋಷಿಸಿದರು. ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಈ ಯಜ್ಞ ನಡೆಯಲಿದೆ.
ಅಭಿಯಾನವು ವರ್ತಮಾನ ಮತ್ತು ಭವಿಷ್ಯವನ್ನು ಉಳಿಸುವ ನಮ್ಮ ಪ್ರಯತ್ನಗಳ ಭಾಗವಾಗಿದೆ ಮತ್ತು ಇದು ಪ್ರಕೃತಿಯ ಬಗ್ಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ” ಎಂದು ಹೇಳಿದ ಮುಖ್ಯಮಂತ್ರಿ ಯೋಗಿ, ಪ್ರತಿಯೊಬ್ಬ ನಾಗರಿಕರೂ ವೃಕ್ಷ ಅಭಿಯಾನದ ಭಾಗವಾಗಲು ಮತ್ತು ಅದರ ಯಶಸ್ಸಿಗೆ ಕೊಡುಗೆ ನೀಡಲು ಆಹ್ವಾನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಿತರಾಗಿ, ಉತ್ತರ ಪ್ರದೇಶವು ಕಳೆದ ಒಂಬತ್ತು ವರ್ಷಗಳಲ್ಲಿ ಜನ ಸಹಭಾಗಿತ್ವದ ಮೂಲಕ 242 ಕೋಟಿಗೂ ಹೆಚ್ಚು ಸಸಿಗಳನ್ನು ನೆಡುವ ಬೃಹತ್ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



