
ನವದೆಹಲಿ: ಪ್ಯಾರಿಸ್ನಲ್ಲಿರುವ ಚಂಡೀಗಢದ ಪಾರಂಪರಿಕ ಪೀಠೋಪಕರಣಗಳ ಹರಾಜನ್ನು ನಿಲ್ಲಿಸಲಾಗಿದೆ. ಫ್ರಾನ್ಸ್ನಲ್ಲಿರುವ ಭಾರತದ ರಾಯಭಾರ ಕಚೇರಿಯ ಹಸ್ತಕ್ಷೇಪದ ನಂತರ ಹರಾಜು ಪ್ರಕ್ರಿಯೆ ನಿಂತು ಹೋಗಿದೆ.
ಹರಾಜು ಮಾಡಲು ನಿರ್ಧರಿಸಲಾಗಿದ್ದ ವಸ್ತುಗಳೆಂದರೆ ಪಂಜಾಬ್ ಯೂನಿವರ್ಸಿಟಿ ಮತ್ತು ಪಿಜಿಐಎಂಆರ್ಗೆ ಸಂಬಂಧಿಸಿದ ಪಿಯರ್ ಜೀನರೆಟ್ (Pierre Jeanneret) ವಿನ್ಯಾಸದ ಎರಡು ಹೆರಿಟೇಜ್ ಕುರ್ಚಿಗಳು. ಅಂದಾಜು ಬೆಲೆ ರೂ 4.30 ಲಕ್ಷದಿಂದ ರೂ. 7.52 ಲಕ್ಷದ ನಡುವೆ ಇತ್ತು.
ಚಂಡೀಗಢ ಆಡಳಿತವು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ತುರ್ತು ಹಸ್ತಕ್ಷೇಪ ಕೋರಿತ್ತು. ಅದರಲ್ಲಿ ಹರಾಜು ನಿಲ್ಲಿಸುವುದು, ವಸ್ತುಗಳನ್ನು ಸಂರಕ್ಷಿಸುವುದು, ಮಾಲೀಕತ್ವ ಪರಿಶೀಲನೆ ಮತ್ತು ಭಾರತಕ್ಕೆ ಮರಳಿಸುವ ಕ್ರಮಗಳನ್ನು ಒತ್ತಾಯಿಸಿತ್ತು.
ಭಾರತೀಯ ದೂತಾವಾಸದ ಪ್ರಯತ್ನದಿಂದ ಹರಾಜು ಸಂಸ್ಥೆಯು ವಸ್ತುಗಳನ್ನು ಹರಾಜಿನಿಂದ ಹಿಂತೆಗೆದುಕೊಂಡಿದೆ. ಇದು ಚಂಡೀಗಢದ ಹೆರಿಟೇಜ್ ವಸ್ತುಗಳ ವಿದೇಶಿ ಹರಾಜು ನಿಲ್ಲಿಸುವಲ್ಲಿ ಮೊದಲ ಯಶಸ್ವಿ ಕಾರ್ಯ ಎಂದು ವರದಿಯಾಗಿದೆ.
ನಗರದ ಅಮೂಲ್ಯವಾದ ಪಾರಂಪರಿಕ ಆಸ್ತಿಗಳನ್ನು ರಕ್ಷಿಸುವಲ್ಲಿ ಸಕಾಲಿಕ ಬೆಂಬಲ ನೀಡಿದ್ದಕ್ಕಾಗಿ ಚಂಡೀಗಢ ಆಡಳಿತವು ವಿದೇಶಾಂಗ ಸಚಿವಾಲಯಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



