ಟೆಕ್ಸಾಸ್: ಅಮೆರಿಕಾದ ಟೆಕ್ಸಾಸ್ನ 31ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಅಭ್ಯರ್ಥಿಯೊಬ್ಬರು ಪವಿತ್ರ ಕುರಾನ್ ಪ್ರತಿಯನ್ನು ಸುಟ್ಟು ರಾಜ್ಯದಲ್ಲಿ ಇಸ್ಲಾಂ ಅನ್ನು ಕೊನೆಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ರಿಪಬ್ಲಿಕನ್ ಅಭ್ಯರ್ಥಿ ವ್ಯಾಲೆಂಟಿನಾ ಗೊಮೆಜ್ “ಟೆಕ್ಸಾಸ್ನಲ್ಲಿ ಇಸ್ಲಾಂ ಅನ್ನು ಕೊನೆಗೊಳಿಸುವುದು ನನ್ನ ಗುರಿ” ಎಂದು ಹೇಳಿದ್ದಾರೆ. ಅವರು ಮುಸ್ಲಿಮರನ್ನು ರಾಜ್ಯವನ್ನು ತೊರೆಯುವಂತೆ ಕೇಳಿಕೊಂಡಿದ್ದು, “ಮುಸ್ಲಿಮರು 57 ಮುಸ್ಲಿಂ ರಾಷ್ಟ್ರಗಳಲ್ಲಿ ಯಾವುದಾದರೂ ಒಂದಕ್ಕೆ ಹೋಗಬಹುದು” ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯವು ಕ್ರಿಶ್ಚಿಯನ್ ರಾಷ್ಟ್ರಗಳನ್ನು ಹಿಂಸಾಚಾರದ ಮೂಲಕ ಬೆದರಿಸುತ್ತಿದೆ ಎಂದು ಆರೋಪಿಸಿರುವ ಅವರು, ಗುರಿಯನ್ನು ಸಾಧಿಸಲು ಜನರಿಗೆ ಸಹಾಯ ಮಾಡುವಂತೆ ಒತ್ತಾಯಿಸಿದ್ದಾರೆ.
“ಮುಸ್ಲಿಮರು ಕ್ರಿಶ್ಚಿಯನ್ ರಾಷ್ಟ್ರಗಳನ್ನು ವಶಪಡಿಸಿಕೊಳ್ಳುವ ಹಾದಿಯಲ್ಲಿ ಅತ್ಯಾಚಾರ ಮಾಡುತ್ತಿದ್ದಾರೆ ಮತ್ತು ಕೊಲ್ಲುತ್ತಿದ್ದಾರೆ. ನೀವು ಎಂದಿಗೂ ತಲೆಬಾಗಬೇಕಾಗಿಲ್ಲ ಕಾಂಗ್ರೆಸ್ಗೆ ಹೋಗಲು ನನಗೆ ಸಹಾಯ ಮಾಡಿ” ಎಂದು ಜನರನ್ನು ಕೇಳಿಕೊಂಡಿದ್ದಾರೆ.
“ನಿಮ್ಮ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಲಾಗುತ್ತದೆ ಮತ್ತು ನಿಮ್ಮ ಪುತ್ರರ ಶಿರಚ್ಛೇದ ಮಾಡಲಾಗುತ್ತದೆ, ನಾವು ಒಮ್ಮೆ ಮತ್ತು ಶಾಶ್ವತವಾಗಿ ಇಸ್ಲಾಂ ಅನ್ನು ನಿಲ್ಲಿಸದ ಹೊರತು ಇದು ನಿಲ್ಲೋದಿಲ್ಲ” ಎಂದು ಅವರು ವೀಡಿಯೊವನ್ನು ಪ್ರಾರಂಭಿಸಿದ್ದು, ನಂತರ ಕುರಾನ್ಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ “ಯೇಸು ಕ್ರಿಸ್ತನಿಂದ ನಡೆಸಲ್ಪಡುತ್ತಾರೆ” ಎನ್ನುವ ಮೂಲಕ ವೀಡಿಯೊವನ್ನು ಕೊನೆಗೊಳಿಸಿದ್ದಾರೆ.
ಕುರಾನ್ ಅನ್ನು ಸುಟ್ಟುಹಾಕಿದ್ದಕ್ಕೆ ವಿಷಾದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅಕ್ಟೋಬರ್ 7 ರಂದು ಇಸ್ರೇಲ್ನಲ್ಲಿ ನಡೆದ ದಾಳಿಗೆ ಕುರಾನ್ ಅನ್ನು ದೂಷಿಸಿದರು.
I stand by my actions & I will never bend a knee to the book that is responsible for the massacre of October 7th, took the lives of 13 U.S service members at Abbey Gate, & calls for our assassination.
Since you love the muslims so much, why don’t you open the borders & let the… https://t.co/TlhHWZSLmd
— Valentina Gomez (@ValentinaForUSA) August 27, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.