ತಾಥುಂಗ್: ಪ್ರತಿ ಧಾರ್ಮಿಕ ಕ್ಷೇತ್ರಕ್ಕೂ ತನ್ನದೇ ಆದ ಧಾರ್ಮಿಕ ಹಾಗೂ ಪೌರಾಣಿಕ ಕಥೆಗಳಿವೆ. ಇಸ್ಲಾಂ, ಹಾಗೂ ಕ್ರೈಸ್ತ ಧರ್ಮಕ್ಕಿಂತ ಹಿಂದು ಧರ್ಮವು ಪುರಾತನ ಧರ್ಮವಾಗಿದೆ. ಪ್ರತಿ ಧಾರ್ಮಿಕ ಕ್ಷೇತ್ರವು ಒಂದಲ್ಲಾ ಒಂದು ಪ್ರಾಮುಖ್ಯತೆಯನ್ನು ಹೊಂದಿವೆ. ಸನಾತನ ಧರ್ಮವು ಭಾರತದ ಅತ್ಯಂತ ಪ್ರಾಚೀನ ಧರ್ಮವಾಗಿದ್ದು, ಇದು ಅನೇಕ ದೇವಾಲಯಗಳ ಅನನ್ಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಪ್ರತಿಯೊಂದು ದೇವಾಲಯವು ನಿರ್ದಿಷ್ಟ ಭಕ್ತರಿಗಾಗಿ ಮೀಸಲಾಗಿದೆ. ಅಲ್ಲಿ ನಡೆಯುವ ಅನೇಕ ಪವಾಡಗಳೇ ಅದಕ್ಕೆ ಸಾಕ್ಷಿ.
ಗಾಳಿಯಲ್ಲಿ ತೇಲಾಡುವಂತಹ ವಿಶಿಷ್ಟ ದೇವಾಲಯ ಒಂದು ಚೀನಾದಲ್ಲಿ ಕಂಡುಬಂದಿದೆ. ಆದರೆ ಈ ದೇವಾಲಯದಲ್ಲಿ ದೇವತೆಗಳು ವಾಸಿಸುತ್ತಿದ್ದಾರೆ ಎಂದು ನಂಬಲಾಗಿದೆ. ಆದರೆ ಯಾವುದೇ ಪವಾಡಗಳು ನಡೆದಿರುವ ಬಗ್ಗೆ ಈವರೆಗೆ ಸಾಕ್ಷ್ಯಗಳು ದೊರೆತಿಲ್ಲ.
ಈ ದೇವಾಲಯವು ಯಾವುದೇ ಸಹಾಯವಿಲ್ಲದೇ ಗಾಳಿಯಲ್ಲಿ ತೇಲಾಡುವಂತೆ ಇದ್ದು, ಅದರ ವೈಶಿಷ್ಟ್ಯತೆಯಿಂದಾಗಿ ಚೀನಾದಾದ್ಯಂತ ಈ ದೇವಾಲಯ ಪ್ರಸಿದ್ಧಿಯನ್ನು ಪಡೆದಿದೆ. ಚೀನಾಗೆ ಭೇಟಿ ನೀಡುವ ಅನೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುವುದು ವಿಶೇಷ. ಈ ದೇವಾಲಯವು ತಾಥುಂಗ್ ಪ್ರಾಂತ್ಯದಲ್ಲಿ ಸುಮಾರು 1400 ವರ್ಷಗಳ ಹಿಂದೆ ಸ್ಥಾಪನೆಗೊಂಡಿತ್ತು ಎಂದು ಅಂದಾಜಿಸಲಾಗಿದೆ. ಈ ಸಂರಕ್ಷಿತ ದೇವಾಲಯವು ಬೌದ್ಧ, ಟಾವೊ, ಕನ್ಫೂಷಿಯಸ್ ಮುಂತಾದ ಮಿಶ್ರ ಧರ್ಮೀಯರಿಗಾಗಿಯೇ ನಿರ್ಮಿಸಲಾಗಿದೆ.
ಈ ದೇವಸ್ಥಾನವು ಅತ್ಯಂತ ಎತ್ತರದ ಬೆಟ್ಟ ಪ್ರದೇಶದಲ್ಲಿ ಸ್ಥಾಪನೆಗೊಂಡಿದೆ. ಈ ದೇವಾಲಯದ ಎರಡೂ ಭಾಗಗಳಲ್ಲಿ 100 ಮೀ. ಎತ್ತರದಲ್ಲಿ ಕಡಿದಾದ ಬೆಟ್ಟವನ್ನು ಕಾಣಬಹುದು. 50 ಮೀ. ಎತ್ತರದಲ್ಲಿ ಬಂಡೆಕಲ್ಲಿನಿಂದಲೇ ಕೂಡಿದ ದೇವಾಲಯವು ಈ ಬೆಟ್ಟಗಳ ನಡುವೆ ಗಾಳಿಯಲ್ಲಿ ತೂಗುತ್ತಿರುವಂತೆ ಗೋಚರವಾಗುತ್ತದೆ. ಎರಡು ಮಹಡಿಗಳನ್ನು ಹೊಂದಿರುವುದು ಇದರ ಇನ್ನೊಂದು ವೈಶಿಷ್ಟ್ಯ. ಇದರ ಗೋಡೆಗಳ ಮೇಲೆ ಕೆತ್ತನೆಗಳನ್ನೂ ಮಾಡಲಾಗಿದೆ. ದೇವಾಲಯವನ್ನು ಮರದ ದಿಮ್ಮಿಗಳ ಮೇಲೆ ಸಮತೋಲನವಾಗಿ ಇರಿಸಲಾಗಿದೆ. ದೇವಾಲಯದ ಮೇಲ್ಭಾಗದಲ್ಲಿನ ಒಂದು ಬಂಡೆಯು ವಾಲಿದಂತೆ ಇದ್ದು, ದೇವಾಲಯದ ಮೇಲೆ ಬೀಳುತ್ತಿರುವಂತೆ ತೋರುತ್ತದೆ.
ಈ ತೂಗು ದೇವಾಲಯವು 40 ಪ್ರಮುಖ ಕಟ್ಟಡಗಳು ಹಾಗೂ ಇನ್ನಿತರ ಸಣ್ಣ ದೇವಾಲಯಗಳನ್ನು ಒಳಗೊಂಡಿದೆ. ದೇವಾಲಯಕ್ಕೆ ಆಧಾರವಾಗಿರುವ ಮರವು ನಡೆದಾಡುವಾಗ ಮುರಿದಂತೆ ಶಬ್ದವಾಗುತ್ತಿದ್ದರೂ ಯಾವುದೇ ಅಪಘಾತ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಜನರು ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಮಾರಣಾಂತಿಕವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ದೇವಾಲಯವು ನೆಲದಿಂದ 50 ಮೀ. ಎತ್ತರದಲ್ಲಿರುವುದರಿಂದ ನೆರೆ ಇನ್ನಿತರ ಯಾವುದೇ ಅವಘಡಗಳು ಸಂಭವಿಸಿಲ್ಲ. ಅಲ್ಲದೇ ಸುತ್ತಲೂ ಬೆಟ್ಟಗಳಿಂದ ಕೂಡಿದ್ದರಿಂದ ದಿನದ 3 ಗಂಟೆಗಳ ಕಾಲ ಮಾತ್ರ ಸೂರ್ಯನ ಬೆಳಕು ಈ ದೇವಾಲಯದ ಮೇಲೆ ಬೀಳುತ್ತದೆ. ಈ ಕಾರಣದಿಂದಾಗಿಯೇ ಏನೋ ಕಳೆದ 1400 ವರ್ಷಗಳಿಂದಲೂ ದೇವಾಲಯವು ಸುರಕ್ಷಿತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.