ವಾಷಿಂಗ್ಟನ್: ಖ್ಯಾತ ಮಕ್ಕಳ ಹಕ್ಕು ಹೋರಾಟಗಾರ, ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿಯವರಿಗೆ ಪ್ರತಿಷ್ಟಿತ ಹಾರ್ವರ್ಡ್ ವಿಶ್ವವಿದ್ಯಾನಿಲಯವು ಈ ವರ್ಷದ ಹ್ಯುಮ್ಯಾನಿಟೇರಿಯನ್(ಮಾನವತಾವಾದಿ) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಜೀವನ ಮಟ್ಟದ ಸುಧಾರಣೆಗೆ ಅಪಾರ ಕೊಡುಗೆಗಳನ್ನು ನೀಡಿ, ಇತರರಿಗೆ ಸ್ಪೂರ್ತಿ ತುಂಬವ ವ್ಯಕ್ತಿಗಳಿಗೆ ಅಮೆರಿಕಾದ ಈ ಪ್ರತಿಷ್ಟಿತ ವಿಶ್ವವಿದ್ಯಾನಿಲಯವು ಪ್ರತಿವರ್ಷ ಹ್ಯುಮ್ಯಾನಿಟೇರಿಯನ್ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಇದೀಗ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯನಾಗಿ ಸತ್ಯಾರ್ಥಿ ಹೊರಹೊಮ್ಮಿದ್ದಾರೆ.
ಮಕ್ಕಳ ಹಕ್ಕು ರಕ್ಷಣೆಗೆ, ಮಕ್ಕಳ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸತ್ಯಾರ್ಥಿಯವರು ನೀಡಿದ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ವಿಶ್ವವಿದ್ಯಾನಿಲಯ ಹೇಳಿಕೊಂಡಿದೆ.
‘ಈ ಪ್ರಶಸ್ತಿಯನ್ನು ಲಕ್ಷಾಂತರ ಸಂತ್ರಸ್ಥ ಮಕ್ಕಳ ಪರವಾಗಿ ನಾನು ವಿನಂಬ್ರವಾಗಿ ಸ್ವೀಕರಿಸುತ್ತೇನೆ. ಈ ಜಗತ್ತಿನಿಂದ ಮಕ್ಕಳ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಒಗ್ಗಟ್ಟಾಗಿ ಪಣತೊಡುವ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.