ನವದೆಹಲಿ: ಧಾರ್ಮಿಕ ಮತಾಂತರ ಗ್ಯಾಂಗ್ನ ಮಾಸ್ಟರ್ಮೈಂಡ್ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಒಂದು ಕಾಲದಲ್ಲಿ ತನ್ನ ಸೈಕಲ್ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುತ್ತಿದ್ದ. ಈಗ ಅವನ ಬಳಿ ಬರೋಬ್ಬರಿ 106 ಕೋಟಿ ರೂಪಾಯಿ ಮೌಲ್ಯದ ಹಣವಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಮುಖ್ಯವಾಗಿ ಗಲ್ಫ್ ರಾಷ್ಟ್ರಗಳಿಂದ ಆತ ಸಾಕಷ್ಟು ಹಣವನ್ನು ಪಡೆದುಕೊಂಡಿದ್ದಾನೆ. ಆತನ ಬಳಿ 40 ಬ್ಯಾಂಕ್ ಖಾತೆಗಳಿದ್ದು, ಕನಿಷ್ಠ ಎರಡು ಕೋಟಿ ಮೌಲ್ಯದ ಆಸ್ತಿಗಳಿವೆ.
ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಪತ್ತೆಯಾದ ಮತಾಂತರ ಜಾಲಕ್ಕೆ ಸಂಬಂಧಿಸಿದಂತೆ ಶನಿವಾರ ಲಕ್ನೋದ ಹೋಟೆಲ್ವೊಂದರಲ್ಲಿ ಛಂಗೂರ್ ಬಾಬಾ ಮತ್ತು ಅವನ ಆಪ್ತ ಸಹಚರ ನೀತು ಅಲಿಯಾಸ್ ನಸ್ರೀನ್ ಅನ್ನು ಬಂಧಿಸಲಾಗಿದೆ. ಅಂದಿನಿಂದ, ಜಮಾಲುದ್ದೀನ್ ಸುತ್ತ ಕುಣಿಕೆ ಬಿಗಿಯುತ್ತಿದೆ.
“ಬಡವರು, ಅಸಹಾಯಕ ಕಾರ್ಮಿಕರು, ದುರ್ಬಲ ವರ್ಗಗಳು ಮತ್ತು ವಿಧವೆಯರಿಗೆ ಪ್ರೋತ್ಸಾಹ ಧನ, ಆರ್ಥಿಕ ನೆರವು, ಮದುವೆಯ ಭರವಸೆಗಳು ಮುಂತಾದ ಆಮಿಷವೊಡ್ಡಿ ಅಥವಾ ಬೆದರಿಕೆ ಹಾಕುವ ಮೂಲಕ ಬಲವಂತವಾಗಿ ಈತ ಮತಾಂತರ ಮಾಡಲು ಯತ್ನಿಸುತ್ತಿದ್ದ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಪಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ವು ಛಂಗೂರ್ ಬಾಬಾನ ಬೆನ್ನು ಬೆದ್ದಿದ್ದು, ಈ ಗ್ಯಾಂಗ್ಗೆ ಯಾವುದೇ ಭಯೋತ್ಪಾದಕ ಸಂಬಂಧಗಳಿವೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಬಲರಾಂಪುರದಲ್ಲಿ ಈ ಗ್ಯಾಂಗ್ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರ ವ್ಯಕ್ತಿಗಳ ಬಗ್ಗೆಯೂ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಮೂರು ಸಂಸ್ಥೆಗಳಲ್ಲದೆ, ಛಂಗೂರ್ ಬಾಬಾನರ ಆದಾಯವನ್ನು ಕಂಡುಹಿಡಿಯಲು ಜಾರಿ ನಿರ್ದೇಶನಾಲಯ (ED) ಕೂಡ ಒಂದು ಪ್ರಕರಣವನ್ನು ದಾಖಲಿಸಿದೆ. ಮಂಗಳವಾರ ED ಯ ಲಕ್ನೋ ಘಟಕದಲ್ಲಿ ಜಮಾಲುದ್ದೀನ್ ಗಳಿಕೆಯಲ್ಲಿ ಹಠಾತ್ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ..
ಹಣವನ್ನು ಯಾರು ಕಳುಹಿಸಿದ್ದಾರೆ ಮತ್ತು ಯಾವ ಕಾರಣಗಳಿಗಾಗಿ ಸಂಸ್ಥೆ ತನಿಖೆ ನಡೆಸುತ್ತಿದೆ?
ಛಂಗೂರ್ ಬಾಬಾ ಸಾಮ್ರಾಜ್ಯ
ಛಂಗೂರ್ ಬಾಬಾ ಒಮ್ಮೆ ತನ್ನ ಸೈಕಲ್ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುತ್ತಿದ್ದ. ನಂತರ ಅವನು ಗ್ರಾಮದ ಮುಖ್ಯಸ್ಥನಾದ. ಇಲ್ಲಿಯವರೆಗೆ ದೊರೆತ ದಾಖಲೆಗಳ ಆಧಾರದ ಮೇಲೆ, ಅವನ 40 ವಿಭಿನ್ನ ಖಾತೆಗಳಿಗೆ 106 ಕೋಟಿ ರೂಪಾಯಿಗಳ ಹಣವನ್ನು ಜಮಾ ಮಾಡಲಾಗಿದೆ ಎಂದು ದೃಢಪಡಿಸಲಾಗಿದೆ. ತನಿಖೆಯ ಪ್ರಕಾರ, ಈ ಎಲ್ಲಾ ಹಣವು ಮಧ್ಯಪ್ರಾಚ್ಯದ ಇಸ್ಲಾಮಿಕ್ ದೇಶಗಳಿಂದ ಬಂದಿದೆ.
ಉತ್ತರ ಪ್ರದೇಶದ ರೆಹ್ರಾ ಮಾಫಿ ಗ್ರಾಮದವನಾದ ಛಂಗೂರ್ ಬಾಬಾ ಅವರ ಸಂಪೂರ್ಣ ಸಾಮ್ರಾಜ್ಯವು ನೇಪಾಳದ ಗಡಿಯಲ್ಲಿರುವ ಬಲರಾಂಪುರ ಜಿಲ್ಲೆಯ ಉತ್ತರೌಲಾ ಪ್ರದೇಶದಲ್ಲಿದೆ. ಅಲ್ಲಿ ಹಿಂದೆ ಅವನು ಸ್ಥಳೀಯ ಗ್ರಾಮದ ಮುಖ್ಯಸ್ಥನಾಗಿ ನೇಮಕವಾಗಿದ್ದ.
ಅವರು ತನ್ನ ಪ್ರಸ್ತುತ ಸಹಾಯಕ ನೀತು ಅನ್ನು ಭೇಟಿಯಾದ ನಂತರ, ರೆಹ್ರಾ ಮಾಫಿ ಗ್ರಾಮದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಮಧಪುರದಲ್ಲಿರುವ ದರ್ಗಾ ಪಕ್ಕದ ಭೂಮಿಯಲ್ಲಿ ಕಟ್ಟಡವನ್ನು ನಿರ್ಮಿಸಿದ್ದಾನೆ. ಸರ್ಕಾರಿ ತನಿಖೆಯಲ್ಲಿ ಈ ಕಟ್ಟಡವು ಅಕ್ರಮವಾಗಿದೆ. ಬುಧವಾರ, ಅಧಿಕಾರಿಗಳು ಸರ್ಕಾರಿ ಭೂಮಿಯಲ್ಲಿನ ಅಕ್ರಮ ನಿರ್ಮಾಣವನ್ನು ಕೆಡವಿದರು.
ಆ ಕಟ್ಟಡವು ಎರಡು ವಿಭಾಗ ಹೊಂದಿತ್ತು – ಛಂಗೂರ್ ಬಾಬಾ, ಅವನ ಕುಟುಂಬ ಮತ್ತು ಸಹಾಯಕರು ಒಂದು ಫ್ಲೋರ್ನಲ್ಲಿ ವಾಸಿಸುತ್ತಿದ್ದರೆ. ಇನ್ನೊಂದರಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಮೀಸಲಾಗಿತ್ತು ಆದರೆ ಇಲ್ಲಿಯವರೆಗೆ ಯಾವುದೇ ಯೋಜನೆ ಅನುಷ್ಠಾನವಾಗಿಲ್ಲ. ಅಲ್ಲಿ ಆಸ್ಪತ್ರೆಯನ್ನು ನಿರ್ಮಿಸಲು ಆತ ಮುಂದಾಗಿದ್ದು, ಅದು ಸಾಧ್ಯವಿಲ್ಲ ಎಂದಾದ ಮೇಲೆ ಶಾಲೆ-ಕಾಲೇಜು ನಿರ್ಮಾಣಕ್ಕೆ ಮುಂದಾಗಿದ್ದ. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹಲವು ವರ್ಷಗಳಿಂದ ಕಟ್ಟಡವನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಟ್ಟಡದಲ್ಲಿ ಎರಡು ನಾಯಿಗಳು ಮತ್ತು 15 ಸಿಸಿಟಿವಿ ಕ್ಯಾಮೆರಾಗಳಿವೆ.
ಬಲರಾಂಪುರ ಕಟ್ಟಡದ ಹೊರತಾಗಿ, ಛಂಗೂರ್ ಬಾಬಾ ಕೂಡ ಹಲವಾರು ಇತರ ಸ್ಥಳಗಳಲ್ಲಿ ಅನೇಕ ಆಸ್ತಿಗಳನ್ನು ಹೊಂದಿದ್ದ. ಈ ಆಸ್ತಿಗಳಲ್ಲಿ ಒಂದು ಮಹಾರಾಷ್ಟ್ರದ ಲೋನಾವಾಲದಲ್ಲಿದೆ ಮತ್ತು ಚಂಗೂರ್ ಬಾಬಾ ಮತ್ತು ನವೀನ್ ಹೆಸರಿನಲ್ಲಿ ಖರೀದಿಸಲಾಗಿದೆ – ಇತ್ತೀಚೆಗೆ ಆಗಸ್ಟ್ 2, 2023 ರಂದು ಇಬ್ಬರನ್ನು ಬಂಧಿಸಲಾಗಿದೆ. ಈ ಭೂಮಿಯ ಬೆಲೆ ದಾಖಲೆಗಳ ಪ್ರಕಾರ 49 ಕೋಟಿ ರೂ.
ಈ ಭೂಮಿಯನ್ನು ಮೊಹಮ್ಮದ್ ಅಹ್ಮದ್ ಖಾನ್ ಎಂಬ ವ್ಯಕ್ತಿ ಮಾರಾಟ ಮಾಡಿದ್ದಾನೆ. ಛಂಗೂರ್ ಬಾಬಾಗೆ ಹಣ ಕಳುಹಿಸಿರುವುದು ಪತ್ತೆಯಾಗಿರುವುದರಿಂದ ಅಹ್ಮದ್ ಖಾನ್ ಎಂಬಾತನ ಮೇಲೆಯೂ ತನಿಖೆ ನಡೆಯುತ್ತಿದೆ. ಛಂಗೂರ್ಗೆ ಭೂಮಿಯನ್ನು ಮಾರಾಟ ಮಾಡಿದ ವ್ಯಕ್ತಿಯೇ ಈ ಅಹ್ಮದ್ ಖಾನ್ ಎಂಬುವನೇ ಎಂಬ ಬಗ್ಗೆಯೂ ಈಗ ತನಿಖೆ ನಡೆಯುತ್ತಿದೆ.
ಛಂಗೂರ್ ಗೆ ಅಕ್ರಮ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ ಸರ್ಕಾರಿ ವ್ಯವಸ್ಥೆಯಲ್ಲಿರುವ ಏಜೆಂಟರು, ಅಧಿಕಾರಿಗಳು ಮತ್ತು ನೌಕರರು ಪ್ರಸ್ತುತ ಭದ್ರತಾ ಸಂಸ್ಥೆಗಳ ಕಣ್ಗಾವಲಿನಲ್ಲಿದ್ದಾರೆ. ಅವರು ಎಷ್ಟು ಜನರನ್ನು ಮತಾಂತರಿಸಿದ್ದಾರೆ ಮತ್ತು ಅವರು ಪಡೆದ ಹಣವನ್ನು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿಯೂ ಬಳಸಲಾಗಿದೆಯೇ ಎಂದು ಏಜೆನ್ಸಿಗಳು ತನಿಖೆ ನಡೆಸುತ್ತಿವೆ.
ಮಂಗಳವಾರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು “ಆರಂಭಿಕ ತನಿಖೆ”ಯಲ್ಲಿ ಆರೋಪಿ ಛಂಗೂರ್ ಚಟುವಟಿಕೆಗಳು “ಸಮಾಜದ ವಿರುದ್ಧ ಮಾತ್ರವಲ್ಲ, ರಾಷ್ಟ್ರದ ವಿರುದ್ಧವೂ” ಎಂದು ತೋರಿಸಿದೆ ಎಂದು ಹೇಳಿದ್ದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ದಯೆ ಇರುವುದಿಲ್ಲ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿ, “ಆರೋಪಿಗಳು ಮತ್ತು ಅವರ ಗ್ಯಾಂಗ್ಗೆ ಸಂಬಂಧಿಸಿದ ಇತರ ಅಪರಾಧಿಗಳ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.