ಪಾಟ್ನಾ: ಬಿಹಾರ ವಿಧಾಸಭೆಗೆ ಎರಡನೇ ಹಂತದ ಚುನಾವಣೆ ಶುಕ್ರವಾರ ಆರಂಭಗೊಂಡಿದೆ. ಒಟ್ಟು 32ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಇದರಲ್ಲಿ ಆರು ನಕ್ಸಲ್ ಪೀಡಿತ ಕ್ಷೇತ್ರವಾಗಿದೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಒಟ್ಟು 456 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 86,13,870 ಜನರು ಮತದಾನ ಮಾಡುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. 9,119 ಮತಗಟ್ಟೆಗಳಿವೆ.
ನಕ್ಸಲ್ ಪೀಡಿತ ಜಿಲ್ಲೆಗಳಾದ ಕೈಮೂರ್, ರೋಹ್ಟಾಸ್, ಅರ್ವಾಲ್, ಜೆಹ್ನಾಬಾದ್, ಔರಂಗಬಾದ್ ಮತ್ತು ಗಯಾದಲ್ಲೂ ಇಂದು ಚುನಾವಣೆ ನಡೆಯಲಿದ್ದು, ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.
ಕೇಂದ್ರ ಅರೆಸೇನಾ ಪಡೆಯ ಒಟ್ಟು 993 ತುಕಡಿಗಳು ಮತ್ತು ಅಪಾರ ಸಂಖ್ಯೆಯ ರಾಜ್ಯ ಪೊಲೀಸರು ಚುನಾವಣೆಯ ವೇಳೆ ಶಾಂತಿ ಕಾಪಾಡುವುದಕ್ಕಾಗಿ ನಿಯೋಜನೆಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.