ನವದೆಹಲಿ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಭಾನುವಾರ ಕೇಂದ್ರವನ್ನು ಟೀಕಿಸಿ, ದೇವಾಲಯಗಳ ಮೇಲೆ ಜಿಎಸ್ಟಿ ವಿಧಿಸಲಾಗುತ್ತಿದೆ ಎಂಬ ಒಂದು ಸುದ್ದಿ ಲೇಖನವೊಂದನ್ನು ಹಂಚಿಕೊಂಡಿದ್ದು, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಡಿಯಲ್ಲಿ ಆದಾಯ ಗಳಿಸುವ ದೇವಾಲಯಗಳನ್ನು ಈಗ ಜಿಎಸ್ಟಿಗೆ ಒಳಪಡಿಸಲಾಗಿದೆ ಎಂದು ಈ ಲೇಖನದಲ್ಲಿ ಹೇಳಲಾಗಿದೆ. ಆದರೆ ಇದು ಸುಳ್ಳು ಎಂದು ಬಿಜೆಪಿ ಕಿಡಿಕಾರಿದೆ.
ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಈ ವಿಷಯದಲ್ಲಿ ಜೈರಾಮ್ ರಮೇಶ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಧಾರ್ಮಿಕ ವಿಷಯಗಳಲ್ಲಿ ಅಗ್ಗದ ರಾಜಕೀಯ ಲಾಭಗಳನ್ನು ಗಳಿಸಲು ನಿರಂತರವಾಗಿ ಸತ್ಯಗಳನ್ನು ತಿರುಚುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಜೈರಾಮ್ ರಮೇಶ್ ಅವರು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿರುವ ಅಮಿತ್ ಮಾಳವೀಯ, ಮಹಾ ಕುಂಭದಲ್ಲಿ ಭಾಗಿಯಾಗದ ಇಡೀ ಕಾಂಗ್ರೆಸ್ ನಾಯಕತ್ವವನ್ನು ಟೀಕಿಸಿದರು.
“ದೇಗುಲ ವಿಷಯಗಳ ಬಗ್ಗೆ ಅವರ ತಿಳುವಳಿಕೆಗೆ ಆಳವಿಲ್ಲ, ಅವರು ಉದ್ದೇಶಪೂರ್ವಕವಾಗಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ, ಕಾಂಗ್ರೆಸ್ ಪಕ್ಷ ದಶಕಗಳಿಂದಲೂ ಇದನ್ನೇ ಮಾಡಿತ್ತಿದೆ. ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳು ಈಗಾಗಲೇ ಸಮಗ್ರ ಜಿಎಸ್ಟಿ ವಿನಾಯಿತಿಗಳನ್ನು ಹೊಂದಿವೆ. ಪ್ರಸಾದ ಪೂರೈಕೆ, ಧಾರ್ಮಿಕ ಸಮಾರಂಭಗಳನ್ನು ನಡೆಸುವುದು, ಕಾನೂನುಬದ್ಧವಾಗಿ ವ್ಯಾಖ್ಯಾನಿಸಲಾದ ಮಿತಿಗಳಿಗಿಂತ ಕಡಿಮೆ ಇರುವ ಆವರಣ, ಸಮುದಾಯ ಭವನಗಳು ಅಥವಾ ಅಂಗಡಿಗಳನ್ನು ಬಾಡಿಗೆ ನೀಡುವುದು, ಹೆಚ್ಚುವರಿಯಾಗಿ, ಆದಾಯ ತೆರಿಗೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಉದ್ದೇಶಗಳಿಗಾಗಿ ದೇವಾಲಯಗಳು ಒದಗಿಸುವ ಸೇವೆಗಳು ಸಹ ಜಿಎಸ್ಟಿಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿವೆ. ಜಿಎಸ್ಟಿ ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ಅನ್ವಯಿಸುತ್ತದೆ. ದೇವಾಲಯಗಳ ಧಾರ್ಮಿಕ ಅಥವಾ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಅಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.
Sunday Evening Tutorial for Jairam—who constantly twists facts just to score cheap political points on religious matters.
Either his understanding of these issues is embarrassingly shallow, or he is deliberately misleading the public—just as the Congress party has done for… https://t.co/xyUDWMk8EV pic.twitter.com/qoPZpCi7Jw
— Amit Malviya (@amitmalviya) March 9, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.