ನವದೆಹಲಿ: ಯಮುನಾ ನದಿಗೆ ವಿಷ ಬೆರೆಸಲಾಗಿದೆ ಎಂಬ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲವನ್ನು ಸೃಷ್ಟಿ ಮಾಡಿದೆ. ಅವರ ಈ ಆರೋಪದ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಈ ದೂರುಗಳಿಗೆ ಸಂಬಂಧಿಸಿದಂತೆ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ನಾಳೆ ರಾತ್ರಿ 8 ಗಂಟೆಯೊಳಗೆ ದೂರುಗಳಿಗೆ ಸಾಕ್ಷ್ಯಾಧಾರಗಳೊಂದಿಗೆ ಪ್ರತಿಕ್ರಿಯೆ ನೀಡುವಂತೆ ಆಯೋಗವು ಕೇಜ್ರಿವಾಲ್ ಅವರಿಗೆ ಸೂಚನೆ ನೀಡಿದೆ. ದೆಹಲಿ ಜಲ ಮಂಡಳಿಯ ವರದಿಯನ್ನು ಪರಿಶೀಲಿಸಿರುವುದಾಗಿಯೂ ಆಯೋಗ ಹೇಳಿದ್ದು, ಇದರಲ್ಲಿ ಯಮುನಾ ನದಿಯಲ್ಲಿ ಯಾವುದೇ ವಿಷ ಬೆರೆಸಿದ ಬಗ್ಗೆ ಉಲ್ಲೇಖಿಸಲಾಗಿಲ್ಲ.
ವಿಷ ಬೆರೆಸಿದ ಆರೋಪಗಳನ್ನು ಮಾಡುವಾಗ ವಾಸ್ತವಿಕ ಆಧಾರವಿರಬೇಕು. ಇಂತಹ ಆರೋಪಗಳು ಪ್ರಾದೇಶಿಕ ಗುಂಪುಗಳು ಮತ್ತು ನೆರೆಯ ರಾಜ್ಯಗಳ ನಿವಾಸಿಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಗಂಭೀರ ಪರಿಣಾಮಗಳನ್ನು ಹೊಂದಿರುತ್ತವೆ, ರಿನ ಲಭ್ಯತೆಯ ಕೊರತೆಯಿರುವ ಈ ಸಂದರ್ಭದಲ್ಲಿ ಊಹಾತ್ಮಕ ಆರೋಪಗಳು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಬೆದರಿಕೆ ಹಾಕುತ್ತವೆ ಎಂದು ಆಯೋಗ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.