ನವದೆಹಲಿ: 1971 ರ ಯುದ್ಧ ಸಂದರ್ಭದಲ್ಲಿ ಪಾಕಿಸ್ಥಾನದ ಶರಣಾಗತಿಯನ್ನು ಪ್ರದರ್ಶಿಸುವ ಸಾಂಪ್ರದಾಯಿಕ ಚಿತ್ರವನ್ನು ಸೋಮವಾರ ಮಾನೆಕ್ಷಾ ಕನ್ವೆನ್ಶನ್ ಸೆಂಟರ್ನಲ್ಲಿ ಸೇನೆ ಅಳವಡಿಸಿದೆ. ವಿಜಯ್ ದಿವಸ್ ಸಂದರ್ಭದಲ್ಲೇ ಈ ಫೋಟೋವನ್ನು ಇಲ್ಲಿ ಹಾಕಲಾಗಿದೆ. ವಿಜಯ್ ದಿವಸ್ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾರತದ ಐತಿಹಾಸಿಕ ವಿಜಯವನ್ನು ಗುರುತಿಸುತ್ತದೆ. ಈ ಚಿತ್ರದಲ್ಲಿ ಪಾಕಿಸ್ಥಾನದ ಅಂದಿನ ಸೇನಾ ಮುಖ್ಯಸ್ಥ ಶರಣಾಗತಿ ಒಪ್ಪಂದಕ್ಕೆ ಸಹಿ ಹಾಕುವ ಚಿತ್ರಣವಿದೆ.
ಈ ಹಿಂದೆ ಈ ವರ್ಣಚಿತ್ರವನ್ನು ಭಾರತೀಯ ಸೇನೆಯ ಕೇಂದ್ರ ಕಛೇರಿಯಲ್ಲಿ ಹಾಕಲಾಗಿತ್ತು. ಇತ್ತೀಚಿಗಷ್ಟೇ ಅದನ್ನು ಅಲ್ಲಿಂದ ತೆಗೆಯಲಾಗಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆ ಫೋಟೋವನ್ನು ಮಾನೆಕ್ಷಾ ಕನ್ವೆನ್ಶನ್ ಸೆಂಟರ್ನಲ್ಲಿ ಹಾಕುವ ಮೂಲಕ ಸೇನೆ ವಿವಾದಕ್ಕೆ ತೆರೆ ಎಳೆದಿದೆ.
“ವಿಜಯ್ ದಿವಸ್ ಸಂದರ್ಭದಲ್ಲಿ, ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ, ಸೇನಾ ಪತ್ನಿಯರ ಕಲ್ಯಾಣ ಸಂಘದ ಅಧ್ಯಕ್ಷರಾದ ಶ್ರೀಮತಿ ಸುನೀತಾ ದ್ವಿವೇದಿ ಅವರೊಂದಿಗೆ 1971 ರ ಅಪ್ರತಿಮ ಶರಣಾಗತಿಯನ್ನು ಸಂಕೇತಿಸುವ ವರ್ಣಚಿತ್ರವನ್ನು ಅತ್ಯಂತ ಸೂಕ್ತವಾದ ಸ್ಥಳದ ಮಾನೆಕ್ಷಾ ಕನ್ವೆನ್ಶನ್ ಸೆಂಟರ್ನಲ್ಲಿ ಅಳವಡಿಸಿದರು. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಅವರು 1971 ರ ಯುದ್ಧದ ಹೀರೋ” ಎಂದು ಸೇನೆಯು X ನಲ್ಲಿ ಪೋಸ್ಟ್ ಮಾಡಿದೆ. ಫೋಟೋ ಅಳವಡಿಕೆ ಸಂದರ್ಭದಲ್ಲಿ ಸೇನೆಯ ಹಿರಿಯ ಶ್ರೇಣಿಯ ಅಧಿಕಾರಿಗಳು ಮತ್ತು ಯೋಧರು ಉಪಸ್ಥಿತರಿದ್ದರು.
ಈ ಚಿತ್ರಕಲೆಯು ಭಾರತೀಯ ಸಶಸ್ತ್ರ ಪಡೆಗಳ ಶ್ರೇಷ್ಠ ಮಿಲಿಟರಿ ವಿಜಯಗಳಲ್ಲಿ ಒಂದನ್ನು ಪ್ರತಿಬಿಂಬಿಸುತ್ತದೆ ಮತ್ತು ಎಲ್ಲರಿಗೂ ನ್ಯಾಯ ಮತ್ತು ಮಾನವೀಯತೆಯ ಬಗೆಗಿನ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿರುವ ಸೇನೆ, ನವದೆಹಲಿಯ ಮಾನೆಕ್ಷಾ ಕೇಂದ್ರದಲ್ಲಿ ಇದರ ನಿಯೋಜನೆಯಿಂದಾಗಿ ಹೆಚ್ಚಿನ ಪ್ರೇಕ್ಷಕರಿಗೆ ಪ್ರಯೋಜನವಾಗಲಿದೆ. ಈ ಸ್ಥಳದಲ್ಲಿ ಭಾರತ ಮತ್ತು ವಿದೇಶಗಳಿಂದ ವೈವಿಧ್ಯಮಯ ಪ್ರೇಕ್ಷಕರು ಮತ್ತು ಗಣ್ಯರ ಗಣನೀಯವಾಗಿ ಭೇಟಿ ನೀಡುತ್ತಾರೆ ಎಂದಿದೆ.
On the occasion of #VijayDiwas, #GeneralUpendraDwivedi #COAS, along with the President #AWWA, Mrs Sunita Dwivedi, installed the iconic 1971 surrender painting to its most befitting place, The Manekshaw Centre, named after the Architect and the Hero of 1971… pic.twitter.com/t9MfGXzwmH
— ADG PI – INDIAN ARMY (@adgpi) December 16, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.