ನವದೆಹಲಿ: ಡಿಸೆಂಬರ್ 16 ಅನ್ನು ಪ್ರತಿ ವರ್ಷ ಭಾರತದಲ್ಲಿ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. 1971 ರ ಈ ದಿನ ಭಾರತ ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಡಿ ಪಾಕ್ ವಿರುದ್ದ ಗೆಲುವು ಸಾಧಿಸಿತ್ತು. ಭಾರತದ ಹೋರಾಟದ ಫಲವಾಗಿ ಪೂರ್ವ ಪಾಕಿಸ್ತಾನದಿಂದ ಬಾಂಗ್ಲಾ ಪ್ರತ್ಯೇಕಗೊಂಡು ಬಾಂಗ್ಲಾದೇಶ ರೂಪುಗೊಂಡಿತು.
ಆಪರೇಷನ್ ಚೆಂಗೀಸ್ ಖಾನ್ ಹೆಸರಿನಲ್ಲಿ 3ನೇ ಡಿಸೆಂಬರ್ 1971ರಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತೀಯ ವಾಯುನೆಲೆಗಳ ಮೇಲೆ ದಾಳಿ ನಡೆಸಿದವು. ಈ ವೇಳೆಯಲ್ಲಿ ಭಾರತವು ಕೂಡ ಪಾಕಿಸ್ತಾನಕ್ಕೆ ನೇರವಾಗಿ ಯುದ್ಧಕ್ಕೆ ಆಹ್ವಾನ ನೀಡಿದ್ದು ಮಾತ್ರವಲ್ಲದೇ, ಭಾರತ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಮೂಲಕ ಯುದ್ಧ ಆರಂಭಿಸಿತು. ಕೊನೆಗೆ ಪಾಕಿಸ್ತಾನ ಪಡೆಗಳ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಝಿ ಡಿ.16ರಂದು 93 ಸಾವಿರ ಸೈನಿಕರ ಗುಂಪಿನೊಂದಿಗೆ ಭಾರತೀಯ ಸೇನೆಗೆ ಶರಣಾದರು.
ಈ ಯುದ್ದದಲ್ಲಿಅಪ್ರತಿಮ ಹೋರಾಟ ನಡೆಸಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ದಿನವನ್ನು ವಿಜಯ್ ದಿವಸ್ ಎಂದು ಆಚರಿಸಿಕೊಂಡು ಬರಲಾಗುತ್ತಿದೆ.
ಟ್ವಿಟ್ ಮಾಡಿರುವ ಮೋದಿ, ” ಇಂದು, ವಿಜಯ್ ದಿವಸ್, 1971 ರಲ್ಲಿ ಭಾರತದ ಐತಿಹಾಸಿಕ ವಿಜಯಕ್ಕೆ ಕಾರಣರಾದ ಕೆಚ್ಚೆದೆಯ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು ನಾವು ಗೌರವಿಸುತ್ತೇವೆ. ಅವರ ನಿಸ್ವಾರ್ಥ ಸಮರ್ಪಣೆ ಮತ್ತು ಅಚಲವಾದ ಸಂಕಲ್ಪ ನಮ್ಮ ರಾಷ್ಟ್ರವನ್ನು ರಕ್ಷಿಸಿದೆ ಮತ್ತು ನಮಗೆ ಕೀರ್ತಿ ತಂದಿದೆ. ಈ ದಿನ ಅವರ ಅಸಾಧಾರಣ ಶೌರ್ಯ ಮತ್ತು ಅವರ ಅಚಲ ಮನೋಭಾವಕ್ಕೆ ಗೌರವವಾಗಿದೆ. ಅವರ ತ್ಯಾಗಗಳು ಪೀಳಿಗೆಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ ಮತ್ತು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಆಳವಾಗಿ ಹುದುಗಿದೆ” ಎಂದಿದ್ದಾರೆ.
Today, on Vijay Diwas, we honour the courage and sacrifices of the brave soldiers who contributed to India’s historic victory in 1971. Their selfless dedication and unwavering resolve safeguarded our nation and brought glory to us. This day is a tribute to their extraordinary…
— Narendra Modi (@narendramodi) December 16, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.