ನವದೆಹಲಿ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಭಾರತ ಸರ್ಕಾರಕ್ಕೆ ರಾಜತಾಂತ್ರಿಕ ಪತ್ರವನ್ನು ಕಳುಹಿಸಿದ್ದು, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾಗೆ ವಾಪಸ್ ಕಳುಹಿಸುವಂತೆ ಒತ್ತಾಯಿಸಿದೆ. 77 ವರ್ಷದ ಅವಾಮಿ ಲೀಗ್ ನಾಯಕಿ ಆಗಸ್ಟ್ 5 ರಿಂದ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವರ 16 ವರ್ಷದ ಆಡಳಿತ ಉರುಳಿದ ಬಳಿಕ ಅವರು ಬಾಂಗ್ಲಾ ಬಿಟ್ಟು ಪಲಾಯನ ಮಾಡಿದರು.
ಢಾಕಾ ಮೂಲದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT) ಶೇಖ್ ಹಸೀನಾ ಮತ್ತು ಅವರ ಮಂತ್ರಿಗಳು, ಸಲಹೆಗಾರರು ಮತ್ತು ಮಾಜಿ ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳ ಹೆಸರಿನಲ್ಲಿ ಬಂಧನ ವಾರಂಟ್ಗಳನ್ನು ಹೊರಡಿಸಿದೆ. ಅವರನ್ನು ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ನರಮೇಧದಲ್ಲಿ ಆರೋಪಿಗಳು ಎಂದು ಆರೋಪಿಸಿದೆ.
ಮಧ್ಯಂತರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹೊಸೈನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ನ್ಯಾಯಾಂಗ ಪ್ರಕ್ರಿಯೆಗಾಗಿ ಬಾಂಗ್ಲಾದೇಶವು ಹಸೀನಾ ಅವರನ್ನು ಇಲ್ಲಿಗೆ ಹಿಂತಿರುಗಿಸಬೇಕೆಂದು ನಾವು ಭಾರತ ಸರ್ಕಾರಕ್ಕೆ ಮೌಖಿಕ (ರಾಜತಾಂತ್ರಿಕ ಸಂದೇಶ) ಕಳುಹಿಸಿದ್ದೇವೆ” ಎಂದಿದ್ದಾರೆ
ಇದಕ್ಕೂ ಮೊದಲು, ಗೃಹ ಸಲಹೆಗಾರ ಜಹಾಂಗೀರ್ ಆಲಂ ಅವರು ಹಸೀನಾ ಅವರ ಹಸ್ತಾಂತರಕ್ಕೆ ಅನುಕೂಲವಾಗುವಂತೆ ಬಾಂಗ್ಲಾ ವಿದೇಶಾಂಗ ಕಚೇರಿ ವಿದೇಶಾಂಗ ಸಚಿವಾಲಯಕ್ಕೆ ಪತ್ರವನ್ನು ಕಳುಹಿಸಿದೆ ಎಂದು ಹೇಳಿದರು. ಆಕೆಯನ್ನು ಹಸ್ತಾಂತರಿಸುವ ಕುರಿತು ನಾವು ವಿದೇಶಾಂಗ ಸಚಿವಾಲಯಕ್ಕೆ ಪತ್ರವನ್ನು ಕಳುಹಿಸಿದ್ದೇವೆ, ಪ್ರಸ್ತುತ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.