ಶ್ರೀನಗರ: ಚಳಿಗಾಲದ ಆಗಮನದೊಂದಿಗೆ ಭೂ ಲೋಕದ ಸ್ವರ್ಗ ಜಮ್ಮು-ಕಾಶ್ಮೀರ ಶ್ವೇತ ವರ್ಣವನ್ನು ಹೊದ್ದ ಸುಂದರ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಬಂಡಿಪೋರಾ, ಬಾರಾಮುಲ್ಲಾ ಮತ್ತು ಗುರೇಜ್ ಸೇರಿದಂತೆ ಕಣಿವೆಯ ಹಲವಾರು ಪ್ರದೇಶಗಳಲ್ಲಿ ಹಿಮಪಾತವಾಗುತ್ತಿದ್ದು, ಇಡೀ ಪ್ರದೇಶ ಅಲಂಕರಿಸಲ್ಪಟ್ಟು ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಕಾಶ್ಮೀರದ ಹಿಮದಿಂದ ಆವೃತವಾದ ಪರ್ವತಗಳು ಶೀತ ಅಲೆಗಳ ನಡುವೆ ಪ್ರವಾಸಿಗರನ್ನು ಹುರಿದುಂಬಿಸುತ್ತಿವೆ.
ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ಗುರೆಜ್ನಲ್ಲಿ ಬುಧವಾರ ತಾಜಾ ಹಿಮಪಾತವಾಗಿದ್ದು, ಕಣಿವೆಯ ಇತರ ಪ್ರದೇಶಗಳಲ್ಲೂ ಹಿಮಪಾತವು ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು, ಲಡಾಖ್ ಕೇಂದ್ರಾಡಳಿತ ಪ್ರದೇಶ ಚಳಿಗಾಲದ ಋತುವಿನ ಮೊದಲ ಹಿಮಪಾತವನ್ನು ಸ್ವೀಕರಿಸಿತು, ಇದು ಸುಂದರವಾದ ಪರ್ವತಗಳನ್ನು ಬಿಳಿಯ ಹಿಮಗಳಲ್ಲಿ ಮುಚ್ಚಿ ಹಾಕಿತ್ತು. ಕಾಶ್ಮೀರದ ಎತ್ತರದ ಪ್ರದೇಶಗಳು ಹಿಮಪಾತವನ್ನು ಅನುಭವಿಸಿದರೆ, ಈ ಋತುವಿನಲ್ಲಿ ಇದುವರೆಗೆ ಬಯಲು ಪ್ರದೇಶದಲ್ಲಿ ಹಿಮಪಾತವಾಗಿಲ್ಲ.
ಹಿಮಾಲಯದ ಹವಾಮಾನವನ್ನು ಆನಂದಿಸಲು ಬಯಸುವ ಪ್ರವಾಸಿಗರಿಗೆ ಜಮ್ಮುಕಾಶ್ಮೀರ ಮತ್ತು ಲಡಾಖ್ ಈಗ ಹಾಟ್ಸ್ಪಾಟ್ ಆಗಿ ಪರಿವರ್ತನೆಗೊಂಡಿದೆ.
#WATCH | Jammu and Kashmir: Bandipora covered in a blanket of snow as it receives fresh snowfall. pic.twitter.com/5vEbXDCddA
— ANI (@ANI) December 12, 2024
#WATCH | Jammu and Kashmir: Sonamarg covered in a blanket of thick snow, as the area receives heavy snowfall pic.twitter.com/VJuYQXDjv5
— ANI (@ANI) December 11, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.