
ಹೈದರಾಬಾದ್: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಏಳು ನಕ್ಸಲರು ಹತರಾಗಿದ್ದಾರೆ. ಪೊಲೀಸ್ ಮಾಹಿತಿದಾರರು ಎಂಬ ಆರೋಪದ ಮೇಲೆ ನಕ್ಸಲರು ಇಬ್ಬರು ಬುಡಕಟ್ಟು ಜನರನ್ನು ಕೊಂದ ಒಂದು ವಾರದ ನಂತರ ಚಲ್ಪಾಕ್ ಅರಣ್ಯದಲ್ಲಿ ನಡೆದ ಘರ್ಷಣೆಯಲ್ಲಿ ಪೊಲೀಸರು ನಕ್ಸಲರನ್ನು ಭೇಟೆಯಾಡಿದ್ದಾರೆ.
ಎನ್ಕೌಂಟರ್ನಲ್ಲಿ ಹತರಾದವರಲ್ಲಿ ಯೆಲ್ಲಾಂಡು-ನರಸಂಪೇಟೆ ಪ್ರದೇಶ ಸಮಿತಿಯ ಕಮಾಂಡರ್ ಭದ್ರು (35) ಕೂಡ ಸೇರಿದ್ದಾನೆ. ಎನ್ಕೌಂಟರ್ನಲ್ಲಿ ಹತರಾದ ಇತರರನ್ನು ಏಗೊಳಪು ಮಲ್ಲಯ್ಯ 43 ವರ್ಷ, ಮುಸ್ಸಕಿ ದೇವಲ್ 22 ವರ್ಷ, ಮುಸ್ಸಕಿ ಜಮುನಾ 23 ವರ್ಷ, ಜೈಸಿಂಗ್ 25 ವರ್ಷ, ಕಿಶೋರ್ 22 ವರ್ಷ ಮತ್ತು ಕಾಮೇಶ್ 23 ವರ್ಷ ಎಂದು ಗುರುತಿಸಲಾಗಿದೆ.
ನಕ್ಸಲರು AK-47, G3 ಮತ್ತು INSAS ರೈಫಲ್ಗಳ ಜೊತೆಗೆ ಇತರ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದು ವರದಿಯಾಗಿದೆ.
ತೆಲಂಗಾಣ ಪೊಲೀಸರ ನಕ್ಸಲ್ ವಿರೋಧಿ ಪಡೆ, ಅರಣ್ಯದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿರುವ ಗ್ರೇಹೌಂಡ್ಸ್ ಸಿಬ್ಬಂದಿ ನಕ್ಸಲರು ಗುಂಪನ್ನು ಗುರುತಿಸಿ ಶರಣಾಗುವಂತೆ ಆದೇಶಿಸಿದಾಗ ಗುಂಡಿನ ಚಕಮಕಿ ಪ್ರಾರಂಭವಾಯಿತು. ನಕ್ಸಲರು ಗ್ರೇಹೌಂಡ್ಸ್ ಕಮಾಂಡೋಗಳ ಮೇಲೆ ಗುಂಡಿನ ದಾಳಿ ನಡೆಸಿದರು ಹೀಗಾಗಿ ಪೊಲೀಸರು ಎನ್ಕೌಂಟರ್ ಆರಂಭಿಸಿದರು ಎನ್ನಲಾಗಿದೆ.
ಇದಕ್ಕೂ ಮುನ್ನ ನವೆಂಬರ್ 21 ರಂದು ಮುಲುಗು ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರರು ಎಂಬ ಶಂಕೆಯ ಮೇಲೆ ನಕ್ಸಲರು ಇಬ್ಬರನ್ನು ಕೊಂದಿದ್ದರು.
ಬಲಿಯಾದವರನ್ನು ಉಯಿಕಾ ರಮೇಶ್ ಮತ್ತು ನಿವಾಸಿ ಉಯಿಕಾ ಅರ್ಜುನ್ ಎಂದು ಗುರುತಿಸಲಾಗಿದೆ. ರಮೇಶ್ ಇದೇ ಮಂಡಲದ ಪೇರೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


