ನವದೆಹಲಿ: ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಸದಸ್ಯ ಸಲ್ಮಾನ್ ರೆಹಮಾನ್ ಖಾನ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು ವಶಕ್ಕೆ ಪಡೆದುಕೊಂಡಿದೆ. ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ ಆತನನ್ನು ಬಂಧಿಸಲಾಯಿತು. ಗುರುವಾರ ಮುಂಜಾನೆ ಭಾರತಕ್ಕೆ ವರ್ಗಾಯಿಸಲಾಯಿತು, ಬಳಿಕ ಅವನನ್ನು ಔಪಚಾರಿಕವಾಗಿ ಎನ್ಐಎ ವಶಕ್ಕೆ ತೆಗೆದುಕೊಂಡಿದೆ.
ಬೆಂಗಳೂರು ಕಾರಾಗೃಹದಲ್ಲಿ ಭಯೋತ್ಪಾದನಾ ಕೃತ್ಯ ಎಸಗುವ ಸಂಚಿನ ಪ್ರಕರಣದಲ್ಲಿ ಸಲ್ಮಾನ್ ಭಾಗಿಯಾಗಿದ್ದ, ಆತ ಮೂಲಭೂತವಾದೀಕರಣ ಮತ್ತು ಭಯೋತ್ಪಾದಕ ಕಾರ್ಯಕರ್ತರಿಗೆ ಸ್ಫೋಟಕಗಳನ್ನು ಪೂರೈಸುವಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾಯಿತು. ರುವಾಂಡಾ ತನಿಖಾ ಬ್ಯೂರೋ (RIB), ಇಂಟರ್ಪೋಲ್ ಮತ್ತು ರಾಷ್ಟ್ರೀಯ ಕೇಂದ್ರ ಬ್ಯೂರೋಗಳ (NCBs) ಸಹಯೋಗದೊಂದಿಗೆ ಸಲ್ಮಾನ್ ಅವನನ್ನು ನಿನ್ನೆ ರುವಾಂಡಾದಲ್ಲಿ ಬಂಧಿಸಲಾಯಿತು.
ಸಲ್ಮಾನ್ 2018 ಮತ್ತು 2022 ರ ನಡುವೆ POCSO (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಅಪರಾಧಕ್ಕಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಕಾರಣ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಈ ಜೈಲುವಾಸದ ಸಮಯದಲ್ಲಿ ಸಲ್ಮಾನ್ ಜೀವಾವಧಿ ಶಿಕ್ಷೆಗೊಳಗಾದ ಭಯೋತ್ಪಾದಕ ಟಿ ನಾಸೀರ್ ಜೊತೆ ಸಂಪರ್ಕಕ್ಕೆ ಬಂದ. ಸಲ್ಮಾನ್ನನ್ನು ಮೂಲಭೂತವಾದಿಯಾಗಿ ರೂಪಿಸುವಲ್ಲಿ ಮತ್ತು ಜೈಲಿನ ಗೋಡೆಗಳೊಳಗೆ ಭಯೋತ್ಪಾದನಾ ಘಟಕವನ್ನು ಸಂಘಟಿಸುವಲ್ಲಿ ನಸೀರ್ ಪಾತ್ರ ವಹಿಸಿದ್ದಾನೆ ಎಂದು ತನಿಖೆಗಳು ಬಹಿರಂಗಪಡಿಸಿವೆ.
ಎನ್ಐಎಯ ತನಿಖೆಯು ಸಲ್ಮಾನ್ ಉಗ್ರಗಾಮಿಯಾದ ನಂತರ ಹೇಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಎಂಬುದನ್ನು ಬಹಿರಂಗಪಡಿಸಿದೆ. ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಅವನು ಸಹಾಯ ಮಾಡಿದ್ದಾನೆ.
ಭಯೋತ್ಪಾದನೆಯ ಸಂಚು ಬಹಿರಂಗವಾದಾಗ, ಸಲ್ಮಾನ್ ಭಾರತದಿಂದ ಪಲಾಯನ ಮಾಡಿದ್ದ, ರುವಾಂಡಾದಲ್ಲಿ ನೆಲೆಸಿದ್ದ ಬಳಿಕ ಅಲ್ಲಿನ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ ಮತ್ತು ಭಾರತಕ್ಕೆ ರವಾನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.