ನವದೆಹಲಿ: ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗಕ್ಕೆ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಹಿಂದೂ ಪರಿಶಿಷ್ಟ ಜಾತಿ (ಎಸ್ಸಿ) ಸಮುದಾಯಕ್ಕೆ ಸೇರಿದ್ದೇನೆ ಎಂದು ಹೇಳಿಕೊಂಡ ಸಿ ಸೆಲ್ವರಾಣಿ ಎಂಬ ಕ್ರಿಶ್ಚಿಯನ್ ಮತ ಪಾಲನೆ ಮಾಡುತ್ತಿರುವ ಮಹಿಳೆ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಆರ್ ಮಹದೇವನ್ ಅವರನ್ನೊಳಗೊಂಡ ಪೀಠವು ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಮತಾಂತರ ಅಥವಾ ಮರುಮತಾಂತರವನ್ನು ಬಳಸುವುದು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವ ಸಾಂವಿಧಾನಿಕ ಉದ್ದೇಶವನ್ನು ದುರ್ಬಲಗೊಳಿಸುತ್ತದೆ ಎಂದು ಒತ್ತಿ ಹೇಳಿದರು.
“ಮತಾಂತರದ ಉದ್ದೇಶವು ಮೀಸಲಾತಿಯ ಪ್ರಯೋಜನಗಳನ್ನು ಪಡೆಯುವುದಾಗಿದ್ದರೆ ಮತ್ತು ಮತಾಂತರವಾದ ಧರ್ಮದಲ್ಲಿ ನಿಜವಾದ ನಂಬಿಕೆಯಿಲ್ಲದಿದ್ದರೆ, ಅದನ್ನು ಅನುಮತಿಸಲಾಗುವುದಿಲ್ಲ. ಅಂತಹ ವ್ಯಕ್ತಿಗಳಿಗೆ ಮೀಸಲಾತಿ ಪ್ರಯೋಜನಗಳನ್ನು ವಿಸ್ತರಿಸುವುದು ನೀತಿಯ ನೈತಿಕತೆಯನ್ನು ಸೋಲಿಸುತ್ತದೆ” ಎಂದು ಪೀಠವು ಹೇಳಿದೆ.
2023 ರ ಜನವರಿಯಲ್ಲಿ ಮದ್ರಾಸ್ ಹೈಕೋರ್ಟ್ ಎಸ್ಸಿ ಕೋಟಾದಡಿಯಲ್ಲಿ ಕ್ಲರ್ಕ್ ಹುದ್ದೆಗೆ ಆಯ್ಕೆಯಾದ ಇನ್ನೊಬ್ಬ ಅಭ್ಯರ್ಥಿಯ ನೇಮಕಾತಿಯನ್ನು ರದ್ದುಗೊಳಿಸಲು ನಿರಾಕರಿಸಿದ ನಂತರ ಸೆಲ್ವರಾಣಿ ಅವರು ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು. ಮೀಸಲಾತಿ ಪ್ರಯೋಜನವನ್ನು ಪಡೆಯಲು ಅವಳು ಹಿಂದೂ ಎಸ್ಸಿ ಸಮುದಾಯವಾದ ವಲ್ಲುವನ್ ಜಾತಿಗೆ ಸೇರಿದವಳು ಎಂದು ಹೇಳಿಕೊಂಡಿದ್ದಳು
ಆದರೆ, ತಮಿಳುನಾಡಿನ ಕ್ಷೇತ್ರ ಪರಿಶೀಲನೆಯಲ್ಲಿ ಸೆಲ್ವರಾಣಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದವಳು ಎಂದು ಬಹಿರಂಗವಾಗಿದೆ, ಆಕೆಯ ಬ್ಯಾಪ್ಟಿಸಮ್ ದಾಖಲೆಗಳು, ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆಯಡಿಯಲ್ಲಿ ನೋಂದಾಯಿಸಲಾದ ಆಕೆಯ ಪೋಷಕರ ಮದುವೆ ಮತ್ತು ನಿಯಮಿತ ಚರ್ಚ್ ಹಾಜರಾತಿಯು ಆಕೆ ಕ್ರಿಶ್ಚಿಯನ್ ಎಂಬುದನ್ನು ಪುಷ್ಟೀಕರಿಸಿದೆ. ಹಿಂದೂ ಧರ್ಮಕ್ಕೆ ಆಕೆ ಮತಾಂತರವಾದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂಬುದನ್ನು ತಿಳಿಸಿದೆ.
ಇದಲ್ಲದೆ, ಒಬ್ಬ ವ್ಯಕ್ತಿಯು ಹಿಂದೂ ಧರ್ಮಕ್ಕೆ ಮರುಮತಾಂತರಗೊಂಡರೆ, ಆರ್ಯ ಸಮಾಜದ ಮೂಲಕ ನಡೆಸಲಾದ ಸಾರ್ವಜನಿಕ ಘೋಷಣೆಗಳು ಅಥವಾ ಸಮಾರಂಭಗಳಂತಹ ಗಣನೀಯ ಪುರಾವೆಗಳು ಅಸ್ತಿತ್ವದಲ್ಲಿರಬೇಕು. ಸೆಲ್ವರಾಣಿ ಅವರ ಪ್ರಕರಣದಲ್ಲಿ, ಅಂತಹ ಮರುಮತಾಂತರಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.