ನವದೆಹಲಿ: ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ʼಮೇರಾ ಸಂವಿಧಾನ್ ಮೇರಾ ಸ್ವಾಭಿಮಾನ್ʼ ಪಾದಾಯಾತ್ರೆಯನ್ನು ಆಯೋಜನೆಗೊಳಿಸಿದೆ. ಈ ಪಾದಯಾತ್ರೆಯಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಅರ್ಜುನ್ ರಾಮ್ ಮೇಘವಾಲ್, ಕಿರಣ್ ರಿಜಿಜು, ಗಜೇಂದ್ರ ಸಿಂಗ್ ಶೇಖಾವತ್ ಮತ್ತು ರಕ್ಷಾ ಖಡ್ಸೆ ಸೇರಿದಂತೆ ಕೇಂದ್ರ ಸಚಿವರು, ಸಂಸದರು ಮತ್ತು ಒಲಿಂಪಿಯನ್ಗಳು ಭಾಗವಹಿಸಿದ್ದರು.
ಭಾರತೀಯ ಸಂವಿಧಾನದ ಅಂಗೀಕಾರವನ್ನು ಆಚರಿಸಲು ಮತ್ತು ಸಂವಿಧಾನ ರಚನೆಕಾರರ ದೃಷ್ಟಿಕೋನವನ್ನು ಗೌರವಿಸಲು ಪಾದಯಾತ್ರೆಯನ್ನು ನಡೆಸಲಾಗಿತು, ಈ ದಿನ ಭಾರತದ ಪ್ರಜಾಪ್ರಭುತ್ವದ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.
ಮೈ ಭಾರತ್, ನೆಹರು ಯುವ ಕೇಂದ್ರ ಸಂಘಟನೆ, ರಾಷ್ಟ್ರೀಯ ಸಮಾಜ ಸೇವೆ, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಸಾಂವಿಧಾನಿಕ ಮೌಲ್ಯಗಳನ್ನು ಉತ್ತೇಜಿಸುವ ಮತ್ತು ಯುವಜನರಲ್ಲಿ ಪ್ರಜಾಪ್ರಭುತ್ವದ ಪೀಠಿಕೆ ಮತ್ತು ತತ್ವಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ ಪಾದಯಾತ್ರೆಯು ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಿಂದ ಬೆಳಿಗ್ಗೆ 8:00 ಗಂಟೆಗೆ ಪ್ರಾರಂಭವಾಗಿದೆ. ಕರ್ತವ್ಯಪಥ್ ಮತ್ತು ಇಂಡಿಯಾ ಗೇಟ್ನಂತಹ ಹೆಗ್ಗುರುತು ಸ್ಥಳಗಳ ಮೂಲಕ ಹಾದುಹೋಗಿ ಕ್ರೀಡಾಂಗಣದಲ್ಲಿ ಕೊನೆಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.