ಅಹಮದಾಬಾದ್: ಭಾರತ-ಪಾಕಿಸ್ತಾನ ಕಡಲ ಗಡಿಯ ಬಳಿ ಪಾಕಿಸ್ತಾನದ ಹಡಗಿನಿಂದ ಸಿಕ್ಕಿಹಾಕಿಕೊಂಡಿದ್ದ ಏಳು ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಎರಡು ಗಂಟೆಗಳ ಕಾಲ ಬೆನ್ನಟ್ಟಿದ ನಂತರ ಭಾನುವಾರ ರಕ್ಷಿಸಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆ (ಪಿಎಂಎಸ್ಎ)ಯ ಹಿಮ್ಮೆಟ್ಟುವ ಪ್ರಯತ್ನಗಳ ಹೊರತಾಗಿಯೂ, ಮೀನುಗಾರರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ ಮತ್ತು ಎಲ್ಲರೂ ಸ್ಥಿರ ವೈದ್ಯಕೀಯ ಸ್ಥಿತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆನ್ನಟ್ಟುವ ಸಂದರ್ಭದಲ್ಲಿ, ಭಾರತೀಯ ಕರಾವಳಿ ಕಾವಲು ಪಡೆ ಪಾಕಿಸ್ತಾನದ ಹಡಗಿಗೆ ಯಾವುದೇ ಷರತ್ತುಗಳ ಅಡಿಯಲ್ಲಿ ಭಾರತೀಯ ಸಮುದ್ರದಿಂದ ‘ಕಾಲ್ ಭೈರವ್’ ಎಂಬ ಮೀನುಗಾರಿಕಾ ದೋಣಿಯಿಂದ ಮೀನುಗಾರರನ್ನು ಸೆರೆಹಿಡಿಯಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು ಎಂದು ರಕ್ಷಣಾ ಅಧಿಕಾರಿಗಳು ವಿವರಿಸಿದರು. ಆದಾಗ್ಯೂ, ಘಟನೆಯ ನಡುವೆ ‘ಕಾಲ ಭೈರವ’ ದೋಣಿ ಹಾನಿಗೊಳಗಾಗಿ ಮುಳುಗಿದೆ. ಅದರಲ್ಲಿದ್ದವರು ಸುರಕ್ಷಿತವಾಗಿ ಮರಳಿದ್ದಾರೆ.
ಕರಾವಳಿ ಕಾವಲು ಪಡೆಗೆ ಮೀನುಗಾರಿಕೆ ರಹಿತ ವಲಯ (ಎನ್ಎಫ್ಜೆಡ್) ಬಳಿ ಭಾರತೀಯ ಮೀನುಗಾರಿಕಾ ದೋಣಿ ತೊಂದರೆಯಲ್ಲಿದೆ ಎಂಬ ಸಂಕೇತ ಸಿಕ್ಕಿದ ತಕ್ಷಣ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ, ಈ ಘಟನೆ ಭಾನುವಾರ ನಡೆದಿದೆ ಎಂದು ಐಸಿಜಿ ಪ್ರಕಟಣೆ ತಿಳಿಸಿದೆ.
“ಅಂದಾಜು ಸಂಜೆ 15:30ಕ್ಕೆ ಗಸ್ತು ತಿರುಗುತ್ತಿದ್ದ ಇಂಡಿಯನ್ ಕೋಸ್ಟ್ ಗಾರ್ಡ್ ಹಡಗು NFZ ಬಳಿ ಕಾರ್ಯನಿರ್ವಹಿಸುತ್ತಿರುವಾಗ ಭಾರತೀಯ ಮೀನುಗಾರಿಕಾ ದೋಣಿಯಿಂದ ದುರಂತದ ಕರೆಯನ್ನು ಸ್ವೀಕರಿಸಿತು. ಭಾರತೀಯ ಮೀನುಗಾರಿಕಾ ದೋಣಿ ಕಾಲ ಭೈರವ್ ಅನ್ನು ಪಾಕಿಸ್ಥಾನದ ನೌಕೆ ವಶಪಡಿಸಿಕೊಂಡಿದೆ ಮತ್ತು ಏಳು ಭಾರತೀಯರನ್ನು ತಡೆಹಿಡಿದಿದೆ ಎಂಬ ಮಾಹಿತಿ ದೊರೆಯಿತು. ತಕ್ಷಣ ಕಾರ್ಯೋನ್ಮುಖರಾದೆವು” ಎಂದು ಕೋಸ್ಟ್ ಗಾರ್ಡ್ ಮಾಹಿತಿ ನೀಡಿದೆ.
#WATCH | Indian Coast Guard Ship Agrim chasing Pakistani ship PMSA Nusrat to rescue Indian fishermen who were being taken to Pakistani waters on Sunday, November 17. The Indian Coast Guard managed to rescue Indian fishermen.
(Source: Indian Coast Guard) https://t.co/fdigpCelvN pic.twitter.com/23w67dt33w
— ANI (@ANI) November 18, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.