ಅಹ್ಮದಾಬಾದ್: ಸತ್ಯವನ್ನು ಶಾಶ್ವತವಾಗಿ ಕತ್ತಲೆಯಲ್ಲಿ ಮರೆಮಾಡಲು ಸಾಧ್ಯವಿಲ್ಲ ಎನ್ನುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಾಲಿವುಡ್ ಸಿನಿಮಾ ʼಸಬರಮತಿ ರಿಪೋರ್ಟ್ʼಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಪ್ರತಿಧ್ವನಿಸಿದ್ದಾರೆ.
2002 ರಲ್ಲಿ ನಡೆದ ಗೋಧ್ರಾ ರೈಲು ದಹನದ ಬಗೆಗಿನ ವಿಕ್ರಾಂತ್ ಮಾಸ್ಸೆ ಅಭಿನಯದ “ಸಬರಮತಿ ರಿಪೋರ್ಟ್” ಸಿನಿಮಾವನ್ನು ಮೋದಿ ಶ್ಲಾಘಿಸಿ ಸತ್ಯವನ್ನು ಶಾಶ್ವತವಾಗಿ ಮರೆಮಾಡಲು ಸಾಧ್ಯವಿಲ್ಲ ಎಂದಿದ್ದರು.
ಇದೀಗ ಅಮಿತ್ ಶಾ ಅವರು ಎಕ್ಸ್ ಪೋಸ್ಟ್ ಮಾಡಿ, “ಶಕ್ತಿಶಾಲಿ ಪರಿಸರ ವ್ಯವಸ್ಥೆಯು ಎಷ್ಟೇ ಪ್ರಯತ್ನಿಸಿದರೂ, ಸತ್ಯವನ್ನು ಕತ್ತಲೆಯಲ್ಲಿ ಶಾಶ್ವತವಾಗಿ ಮರೆಮಾಡಲು ಸಾಧ್ಯವಿಲ್ಲ. #SabarmatiReport ಸಿನಿಮಾವು ಪರಿಸರ ವ್ಯವಸ್ಥೆಯನ್ನು ಅಪ್ರತಿಮ ಧೈರ್ಯದಿಂದ ಧಿಕ್ಕರಿಸುತ್ತದೆ ಮತ್ತು ಸತ್ಯವನ್ನು ಹಗಲಿನಲ್ಲಿ ಬಹಿರಂಗಪಡಿಸುತ್ತದೆ” ಎಂದಿದ್ದಾರೆ.
ಕಳೆದ ವಾರ, ಈ ಸಿನಿಮಾದ ನಾಯಕ ನಟ ವಿಕ್ರಾಂತ್ ಮಾಸ್ಸೆ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಕೊಲೆ ಬೆದರಿಕೆಗಳು ಬಂದಿವೆ. ಆದರೆ ಈ ಚಲನಚಿತ್ರವು “ಸಂಪೂರ್ಣವಾಗಿ ಸತ್ಯವನ್ನು ಆಧರಿಸಿದೆ” ಹೀಗಾಗಿ ನಾನು ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ ಎಂದು ಮಾಸ್ಸೆ ಹೇಳಿದ್ದಾರೆ.
No matter how hard a powerful ecosystem tries, it cannot keep the truth hidden in darkness forever.
The film #SabarmatiReport defies the ecosystem with unparalleled courage and exposes the truth behind the fateful episode to broad daylight. https://t.co/AnVsuCSNwi
— Amit Shah (@AmitShah) November 18, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.