ನವದೆಹಲಿ: ದೆಹಲಿಯ ಮಾಜಿ ಸಾರಿಗೆ ಸಚಿವ ಮತ್ತು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಕೈಲಾಶ್ ಗಹ್ಲೋಟ್ ಅವರು ತಮ್ಮ ಪಕ್ಷ ಮತ್ತು ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಅಂದರೆ ಇಂದು ಬೆಳಿಗ್ಗೆ ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಮತ್ತು ಹರ್ಷ್ ಮಲ್ಹೋತ್ರಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಖಟ್ಟರ್ ಅವರು ಗಹ್ಲೋಟ್ ಅವರ ಸೇರ್ಪಡೆಯನ್ನು ಮಹತ್ವದ ತಿರುವು ಎಂದು ಬಣ್ಣಿಸಿದ್ದಾರೆ. ವಿಶೇಷವಾಗಿ ಫೆಬ್ರವರಿ ವಿಧಾನಸಭೆ ಚುನಾವಣೆಗೆ ಮೊದಲು ಗೆಹ್ಲೋಟ್ ಅವರ ನಿರ್ಧಾರ ಎಎಪಿಗೆ ದೊಡ್ಡ ಹಿನ್ನಡೆ ತಂದಿದೆ.
ಗೆಹ್ಲೋಟ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಇದು ನನಗೆ ಸುಲಭದ ನಿರ್ಧಾರವಗಿರಲಿಲ್ಲ. ನಾನು ಅಣ್ಣಾ ಹಜಾರೆಯವರ ಕಾಲದಿಂದಲೂ ಎಎಪಿಯ ಭಾಗವಾಗಿದ್ದೇನೆ ಮತ್ತು ಶಾಸಕರಾಗಿ ಮತ್ತು ಸಚಿವರಾಗಿ ದೆಹಲಿಗಾಗಿ ದುಡಿದಿದ್ದೇನೆ. ಇದು ರಾತ್ರೋರಾತ್ರಿ ನಿರ್ಧಾರ ಎಂದು ಕೆಲವರು ಭಾವಿಸಬಹುದು ಅಥವಾ ಒತ್ತಡದಿಂದಾಗಿ ತೆಗೆದುಕೊಂಡ ನಿರ್ಧಾರ ಎನ್ನಬಹುದು. ಆದರೆ ನಾನು ಅವರಿಗೆ ಹೇಳಲು ಬಯಸುತ್ತೇನೆ ಒತ್ತಡದಿಂದಾಗಿ ನಾನು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ” ಎಂದು ಗಹ್ಲೋಟ್ ಸುದ್ದಿಗಾರರಿಗೆ ತಿಳಿಸುವ ಮೂಲಕ ಊಹಾಪೋಹಗಳನ್ನು ದೃಢವಾಗಿ ತಿರಸ್ಕರಿಸಿದ್ದಾರೆ.
“ಕೇಂದ್ರೀಯ ತನಿಖಾ ದಳ ಅಥವಾ ಜಾರಿ ನಿರ್ದೇಶನಾಲಯದ ಒತ್ತಡದಿಂದಾಗಿ ನಾನು ಬಿಜೆಪಿ ಸೇರಿದ್ದೇನೆ ಎಂಬ ನಿರೂಪಣೆ ಇದೆ. ನಾನು ಟೀಕಾಕಾರರಿಗೆ ಹೇಳಲು ಬಯಸುವುದೇನೆಂದರೆ 2015 ರಿಂದ, ಎಎಪಿ ಸದಸ್ಯನಾಗಿ, ಶಾಸಕನಾಗಿ ಮತ್ತು ಸಚಿವನಾಗಿ ನಾನು ಎಂದಿಗೂ ಏನನ್ನೂ ಮಾಡಿಲ್ಲ. ಒತ್ತಡದಿಂದಾಗಿ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.