ನವದೆಹಲಿ: ಕೆನಡಾದ ಬ್ರಾಂಪ್ಟನ್ನಲ್ಲಿರುವ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಪ್ರಧಾನಿ ಮೋದಿ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ.
“ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲಿನ ಉದ್ದೇಶಪೂರ್ವಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಮ್ಮ ರಾಜತಾಂತ್ರಿಕರನ್ನು ಬೆದರಿಸುವ ಹೇಡಿತನದ ಪ್ರಯತ್ನಗಳು ಭಯಾನಕವಾಗಿದೆ. ಇಂತಹ ಹಿಂಸಾಚಾರಗಳು ಭಾರತದ ದೃಢತೆಯನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ. ಕೆನಡಾ ಸರ್ಕಾರವು ನ್ಯಾಯವನ್ನು ಖಚಿತಪಡಿಸುತ್ತದೆ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಮೋದಿ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಸ್ವತಃ ಪ್ರಧಾನಿ ಮೋದಿಯವರು ಕೆನಡಾದ ಪರಿಸ್ಥಿತಿಯ ಬಗ್ಗೆ ನೇರವಾಗಿ ಮತ್ತು ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ, ಅವರ ಈ ಹೇಳಿಕೆಯು ಕೆನಡಾದಲ್ಲಿ ಖಲಿಸ್ತಾನ್ ಸಿದ್ಧಾಂತವನ್ನು ಬೆಂಬಲಿಸುವ ಮತ್ತು ಪೋಷಿಸುವ ದೊಡ್ಡ ಪರಿಸರ ವ್ಯವಸ್ಥೆಗೆ ನೀಡಿದ ಎಚ್ಚರಿಕೆಯಾಗಿಯೂ ಕಂಡುಬರುತ್ತದೆ. ಈ ಪರಿಸರ ವ್ಯವಸ್ಥೆಯು ಕೆನಡಾದ ಸರ್ಕಾರವನ್ನೂ ಒಳಗೊಂಡಿದೆ ಎಂಬುದು ಗಮನಾರ್ಹ.
ನಮ್ಮ ರಾಜತಾಂತ್ರಿಕರನ್ನು ಬೆದರಿಸುವ ಹೇಡಿತನದ ಪ್ರಯತ್ನಗಳು ಭಯಾನಕವಾಗಿದೆ ಎಂಬ ಮೋದಿ ಹೇಳಿಕೆಯು ಕೆನಡಾದಿಂದ ತನ್ನ ಹೈಕಮಿಷನರ್ ಅನ್ನು ಭಾರತ ವಾಪಸ್ ಕರೆಸಿಕೊಂಡ ಕೇವಲ ಎರಡು ವಾರಗಳ ನಂತರ ಬಂದಿರುವುದು ನಿರ್ಣಾಯಕವಾಗಿದೆ. ಕೆನಡಾದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಯಲ್ಲಿ ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರು ‘ಆಸಕ್ತ ವ್ಯಕ್ತಿಗಳು’ ಎಂದು ಕೆನಡಾ ಭಾರತಕ್ಕೆ ತಿಳಿಸಿದ ನಂತರ ಒಂದರ ಹಿಂದೊಂದರಂತೆ ಹಿಂದೂ ವಿರೋಧಿ ಘಟನೆಗಳು ಕೆನಡಾದಲ್ಲಿ ನಡೆಯುತ್ತಿದೆ.
ಕೆನಡಾದ ಖಲಿಸ್ತಾನ್ ಕಾರ್ಯಕರ್ತರು ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡುವ ಪೋಸ್ಟರ್ಗಳನ್ನು ಕೂಡ ಹಾಕಿದ್ದರು. ಕೆಲವು ಪೋಸ್ಟರ್ಗಳು ಕೆನಡಾದಲ್ಲಿರುವ ಹಿರಿಯ ಭಾರತೀಯ ರಾಜತಾಂತ್ರಿಕರನ್ನು ಕೊಲ್ಲುವಂತೆಯೂ ಕರೆ ನೀಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.