ನವದೆಹಲಿ: ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರ ಮತ್ತು ಅಮೃತ್ ಉದ್ಯಾನದಲ್ಲಿ ಮರಳುಗಲ್ಲಿನಿಂದ ಮಾಡಲಾದ ಕೋನಾರ್ಕ್ ಚಕ್ರಗಳ ನಾಲ್ಕು ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ.
“ಕೋನಾರ್ಕ್ ಚಕ್ರಗಳ ಸ್ಥಾಪನೆಯು ರಾಷ್ಟ್ರಪತಿ ಭವನ ವೀಕ್ಷಣೆಗೆ ಬರುವ ಸಂದರ್ಶಕರಲ್ಲಿ ದೇಶದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಉಪಕ್ರಮವು ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಂಶಗಳನ್ನು ಪರಿಚಯಿಸಲು ತೆಗೆದುಕೊಳ್ಳುತ್ತಿರುವ ಹಲವಾರು ಕ್ರಮಗಳ ಭಾಗವಾಗಿದೆ. ಈಗಾಗಲೇ ಅಲ್ಲಿ ಬುಡಕಟ್ಟು ಕಲಾವಿದರ ಕಲೆಗಳ ಪ್ರದರ್ಶನ ಏರ್ಪಟ್ಟಿದೆ.
UNESCO ವಿಶ್ವ ಪರಂಪರೆಯ ತಾಣವಾದ ಕೋನಾರ್ಕ್ ಸೂರ್ಯ ದೇವಾಲಯವು ಒಡಿಶಾದ ದೇವಾಲಯದ ವಾಸ್ತುಶಿಲ್ಪದ ಪರಾಕಾಷ್ಠೆಯ ದ್ಯೋತಕವಾಗಿದೆ.
ಇದನ್ನು ಸೂರ್ಯ ದೇವರನ್ನು ಹೊತ್ತ ಬೃಹತ್ ರಥದ ಆಕಾರದಲ್ಲಿ ನಿರ್ಮಿಸಲಾಗಿದೆ. ಕೋನಾರ್ಕ್ ಚಕ್ರಗಳು ಭಾರತದ ಸಾಂಸ್ಕೃತಿಕ ಪರಂಪರೆಯ ಸಂಕೇತಗಳಾಗಿವೆ.
REPLICAS OF KONARK WHEELS AT RASHTRAPATI BHAVAN
Four replicas of the Konark wheels, made of sandstone, have been installed at Rashtrapati Bhavan Cultural Centre and Amrit Udyan. Installation of Konark wheels aims to showcase and promote rich heritage of the country among… pic.twitter.com/o7dKmJVpSn
— PIB India (@PIB_India) October 29, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.