ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಅವರು ನಿನ್ನೆ ನವದೆಹಲಿಯಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮದ್ ಮುಯಿಝು ಅವರನ್ನು ಭೇಟಿ ಮಾಡಿದರು.
ಮುಯಿಝು ಅವರ ಗೌರವಾರ್ಥವಾಗಿ ರಾಷ್ಟ್ರಪತಿ ಔತಣ ಕೂಟ ಏರ್ಪಡಿಸಿದ್ದರು. ಇಬ್ಬರೂ ನಾಯಕರು ಬಹುಮುಖಿ ಭಾರತ-ಮಾಲ್ಡೀವ್ಸ್ ದ್ವಿಪಕ್ಷೀಯ ಸಂಬಂಧವನ್ನು ಪರಿಶೀಲಿಸಿದರು ಮತ್ತು ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಭಾರತದ ‘ನೆರೆಹೊರೆ ಮೊದಲು’ ಮತ್ತು ‘ವಿಷನ್ ಸಾಗರ್’ ನೀತಿಗಳ ಅಡಿಯಲ್ಲಿ ಮಾಲ್ಡೀವ್ಸ್ ನಿಕಟ ಮತ್ತು ಪ್ರಮುಖ ಪಾಲುದಾರ ಎಂದು ಈ ವೇಳೆ ರಾಷ್ಟ್ರಪತಿ ಹೇಳಿದ್ದಾರೆ.
ನಿನ್ನೆ ಅಂಗೀಕರಿಸಿದ ವಿಷನ್ ಡಾಕ್ಯುಮೆಂಟ್ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಗಾಢಗೊಳಿಸುವ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ ಎಂದು ಧಂಖರ್ ಮತ್ತು ಡಾ.ಮುಯಿಝು ಅವರು ಸಭೆಯಲ್ಲಿ ಒಪ್ಪಿಕೊಂಡರು. ಉಭಯ ರಾಷ್ಟ್ರಗಳಿಗೆ ಭವಿಷ್ಯ-ಆಧಾರಿತ ಮತ್ತು ಪ್ರಯೋಜನಕಾರಿಯಾದ ಸಮಗ್ರ ಪಾಲುದಾರಿಕೆಯಾಗಿ ಇದು ರೂಪಾಂತರಗೊಳ್ಳುತ್ತದೆ ಎಂದು ಇಬ್ಬರೂ ನಾಯಕರು ಅಭಿಪ್ರಾಯಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.