ನವದೆಹಲಿ: ಕಾಶ್ಮೀರ ಕಣಿವೆಯನ್ನು ವಿಶ್ವದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಚೆನಾಬ್ ರೈಲ್ವೆ ಸೇತುವೆಯ ಅದ್ಭುತ ನೋಟವನ್ನು ಸೆರೆಹಿಡಿಯುವ ವೀಡಿಯೊವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹಂಚಿಕೊಂಡಿದ್ದಾರೆ.
“ಹೆಲಿಕಾಪ್ಟರ್ ಶಾಟ್ – ಚೆನಾಬ್ ಸೇತುವೆ” ಎಂಬ ಒಕ್ಕಣೆಯೊಂದಿಎ ರೈಲ್ವೆ ಸಚಿವರು ಸೇತುವೆಯ ಕಿರು ವೀಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಚೆನಾಬ್ ರೈಲು ಸೇತುವೆಯು ಉಕ್ಕಿನ ಮತ್ತು ಕಾಂಕ್ರೀಟ್ ಕಮಾನು ಸೇತುವೆಯಾಗಿದ್ದು, ಏಕ-ಹಳಿಯ ರೈಲು ಮಾರ್ಗವನ್ನು ಸಾಗಿಸುತ್ತದೆ, ಇದು J&K ನ ಜಮ್ಮು ವಿಭಾಗದ ರಿಯಾಸಿ ಜಿಲ್ಲೆಯ ಬಕ್ಕಲ್ ಮತ್ತು ಕೌರಿ ನಡುವೆ ಇದೆ.
ಸೇತುವೆಯು ನದಿಯ ಮೇಲೆ 359 ಮೀ (1,178 ಅಡಿ) ಎತ್ತರದಲ್ಲಿ ಚೆನಾಬ್ ನದಿಯನ್ನು ವ್ಯಾಪಿಸಿದೆ, ಇದು ವಿಶ್ವದ ಅತಿ ಎತ್ತರದ ರೈಲು ಸೇತುವೆ ಮತ್ತು ವಿಶ್ವದ ಅತಿ ಎತ್ತರದ ಕಮಾನು ಸೇತುವೆಯಾಗಿದೆ.
Helicopter shot 🎥 – Chenab bridge pic.twitter.com/IGkJ3uZM7u
— Ashwini Vaishnaw (@AshwiniVaishnaw) September 26, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.