ಗುವಾಹಟಿ: ಅಸ್ಸಾಂ ವಿಧಾನಸಭೆಯು ಮುಸ್ಲಿಂ ಶಾಸಕರಿಗೆ ಎರಡು ಗಂಟೆಗಳ ಶುಕ್ರವಾರದ ನಮಾಜ್ ವಿರಾಮವನ್ನು ಒದಗಿಸುವ ದೀರ್ಘಕಾಲದ ಸಂಪ್ರದಾಯವನ್ನು ತೆಗೆದುಹಾಕುವ ಪರವಾಗಿ ಮತ ಹಾಕಿದೆ. ಹೀಗಾಗಿ ಇನ್ನು ಮುಂದೆ ಶುಕ್ರವಾರ ಮಧ್ಯಾಹ್ನ ಮುಸ್ಲಿಂ ಶಾಸಕರಿಗೆ ಪ್ರಾರ್ಥನೆ ನಡೆಸಲು ಯಾವುದೇ ವಿನಾಯಿತಿ ದೊರೆಯುವುದಿಲ್ಲ.
1937 ರಲ್ಲಿ ರಾಜ್ಯದ ವಿಧಾನಸಭೆಯ ಸ್ಥಾಪನೆಯ ಆರಂಭದಲ್ಲಿ ಶುಕ್ರವಾರದ ನಮಾಜ್ಗೆ ವಿರಾಮ ನೀಡುವ ಪದ್ಧತಿ ಆರಂಭವಾಯಿತು. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸದನವನ್ನು ಎರಡು ಗಂಟೆಗಳ ಕಾಲ ಮುಂದೂಡಲಾಗುತ್ತಿತ್ತು, ಇದರಿಂದಾಗಿ ಮುಸ್ಲಿಂ ಶಾಸಕರು ನಮಾಜ್ಗೆ ಹಾಜರಾಗಲು ಮತ್ತು ಊಟದ ನಂತರ ಕೆಲಸಕ್ಕೆ ಮರಳಲು ಅವಕಾಶವಿತ್ತು.
ಆದರೆ ಸ್ಪೀಕರ್ ಬಿಸ್ವಜಿತ್ ಡೈಮರಿ ನೇತೃತ್ವದ ನಿಯಮಗಳ ಸಮಿತಿಯು ಅಸ್ಸಾಂ ವಿಧಾನಸಭೆಯ ಕಾರ್ಯವಿಧಾನದ ನಿಯಮಗಳಿಗೆ ತಿದ್ದುಪಡಿಗಳನ್ನು ಮಾಡಿದ ನಂತರ ವಿರಾಮವನ್ನು ತೆಗೆದುಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಕ್ರಮವನ್ನು “ಐತಿಹಾಸಿಕ” ಎಂದು ಕರೆದಿದ್ದಾರೆ ಮತ್ತು ಇದು ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ವಸಾಹತುಶಾಹಿ ಪದ್ಧತಿಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಘೋಷಿಸಿದ್ದಾರೆ. “ನಮಾಜ್ ವಿರಾಮ ಅಭ್ಯಾಸವನ್ನು ಮುಸ್ಲಿಂ ಲೀಗ್ನ ಸೈಯದ್ ಸಾದುಲ್ಲಾ ಅವರು 1937 ರಲ್ಲಿ ಪರಿಚಯಿಸಿದರು” ಎಂದು ಅವರು ಹೈಲೈಟ್ ಮಾಡಿದ್ದಾರೆ..
“ಅಸ್ಸಾಂ ವಿಧಾನಸಭೆಯ ರಚನೆಯಾದಾಗಿನಿಂದ, ಮುಸ್ಲಿಂ ಸದಸ್ಯರಿಗೆ ನಮಾಜ್ಗೆ ಹೋಗಲು ಅನುಕೂಲವಾಗುವಂತೆ ಶುಕ್ರವಾರದ ಸಭೆಯನ್ನು ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗುತ್ತಿತ್ತು. . ಮುಸ್ಲಿಂ ಸದಸ್ಯರು ನಮಾಜ್ನಿಂದ ಹಿಂತಿರುಗಿದ ನಂತರ ಮಧ್ಯಾಹ್ನದ ಭೋಜನದ ನಂತರದ ಅಧಿವೇಶನದಲ್ಲಿ ಸಭೆ ತನ್ನ ಕಲಾಪವನ್ನು ಪುನರಾರಂಭಿಸುತ್ತಿತ್ತು. ಇತರ ಎಲ್ಲಾ ದಿನಗಳಲ್ಲಿ, ಸದನವು ಧಾರ್ಮಿಕ ಉದ್ದೇಶಗಳಿಗಾಗಿ ಅಂತಹ ಯಾವುದೇ ಮುಂದೂಡಿಕೆ ಇಲ್ಲದೆ ತನ್ನ ಕಲಾಪಗಳನ್ನು ನಡೆಸುತ್ತಿತ್ತು. ಸ್ಪೀಕರ್ ಬಿಸ್ವಜಿತ್ ಡೈಮರಿಅವರು ಈ ವಿಷಯವನ್ನು ಗಮನಿಸಿ ಸಂವಿಧಾನದ ಜಾತ್ಯತೀತ ಸ್ವರೂಪದ ದೃಷ್ಟಿಯಿಂದ ಶುಕ್ರವಾರದಂದು ಯಾವುದೇ ಕಲಾಪ ಮುಂದೂಡಿಕೆ ಇನ್ನು ಮುಂದೆ ಇರುವುದಿಲ್ಲ ಎಂದು ಪ್ರಕಟಿಸಿದ್ದಾರೆ” ಎಂದು ಅಸೆಂಬ್ಲಿಯ ಅಧಿವೇಶನದ ಕೊನೆಯ ದಿನದಂದು ಬಿಡುಗಡೆಯಾದ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.