ಮಂಗಳೂರು: ಕೇಂದ್ರ ಸರ್ಕಾರದ ನಿವೃತ್ತ ನೌಕರರ ಬಹುದಿನ ಬೇಡಿಕೆಯಾದ CGHS ವೆಲ್ ನೆಸ್ ಸೆಂಟರ್ ಅನ್ನು ಮಂಗಳೂರಿನಲ್ಲಿ ತೆರೆಯಲು ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಸಂಸದ ನಳಿನ್ ಕುಮಾರ್ ಅವರ ಪ್ರಯತ್ನದಿಂದ ಬಹುದಿನದ ಬೇಡಿಕೆ ಈಡೇರುತ್ತಿದೆ. ಸಂಸದರು ಕಳೆದ ಬಾರಿ ಕೇಂದ್ರ ಆರೋಗ್ಯ ಸಚಿವರಿಗೆ ಭೇಟಿಯಾಗಿ ಮಂಗಳೂರಿನಲ್ಲಿ CGHS ವೆಲ್ ನೆಸ್ ಸೆಂಟರ್ ನ್ನು ತೆರೆಯುವಂತೆ ಮನವಿ ಮಾಡಿದ್ದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಮನ್ ಸುಖ್ ಮಾಂಡವೀಯ ರವರು ನಳಿನ್ ಕುಮಾರ್ ರವರಿಗೆ ಪತ್ರ ಬರೆದು ಮಂಗಳೂರು ಸೇರಿದಂತೆ ದೇಶದ 20 ನಗರಗಳಲ್ಲಿ CGHS ವೆಲ್ ನೆಸ್ ಸೆಂಟರ್ ಗಳನ್ನು ತೆರೆಯುತ್ತಿರುವುದಾಗಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಹಾಗೂ ನೆರೆಯ ಜಿಲ್ಲೆಗಳ 50ಕ್ಕೂ ಅಧಿಕ ಕೇಂದ್ರ ಸರ್ಕಾರದ ಇಲಾಖೆಗಳ ಸುಮಾರು 5500 ಉದ್ಯೋಗಿಗಳಿದ್ದು, 29000 ಕ್ಕೂ ಅಧಿಕ ನಿವೃತ್ತ ಕೇಂದ್ರ ಸರ್ಕಾರದ ಉದ್ಯೋಗಿಗಳಿದ್ದಾರೆ. ಮಂಗಳೂರಿನಲ್ಲಿ ಈ ಕೇಂದ್ರ ಪ್ರಾರಂಭವಾಗುವುದರಿಂದ ಅವರು ನಿಯಮಾನುಸಾರ ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ. ತಮ್ಮ ಮನವಿಯನ್ನು ಪುರಸ್ಕರಿಸಿ ಮಂಗಳೂರಿಗೆ CGHS ವೆಲ್ ನೆಸ್ ಸೆಂಟರ್ ಅನ್ನು ಮಂಜೂರು ಮಾಡಿದ ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಧ ಡಾ. ಮನ್ಸುಖ್ ಮಾಂಡವೀಯರವರಿಗೆ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.