ನವದೆಹಲಿ: ಬ್ಯಾರಿಸ್ಟರ್ ವರುಣ್ ಘೋಷ್ ಅವರು ಮಂಗಳವಾರ ಇತಿಹಾಸ ನಿರ್ಮಿಸಿದ್ದು, ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಭಾರತ ಸಂಜಾತ ಆಸ್ಟ್ರೇಲಿಯಾದ ಸಂಸತ್ತಿನ ಮೊದಲ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪಶ್ಚಿಮ ಆಸ್ಟ್ರೇಲಿಯಾದವರಾದವ ಘೋಷ್, ಫೆಡರಲ್ ಸಂಸತ್ತಿನ ಸೆನೆಟ್ನಲ್ಲಿ ಆಸ್ಟ್ರೇಲಿಯಾದ ರಾಜ್ಯವನ್ನು ಪ್ರತಿನಿಧಿಸಲು ಶಾಸಕಾಂಗ ಸಭೆ ಮತ್ತು ಲೆಜಿಸ್ಲೇಟಿವ್ ಕೌನ್ಸಿಲ್ನಿಂದ ಆಯ್ಕೆಯಾದ ನಂತರ ಹೊಸ ಸೆನೆಟರ್ ಆಗಿ ನೇಮಕಗೊಂಡಿದ್ದಾರೆ.
ಘೋಷ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂದರ್ಭದಲ್ಲಿ ಆಸ್ಟ್ರೇಲಿಯಾದ ವಿವಿಧ ರಾಜಕಾರಣಿಗಳಿಂದ ಆತ್ಮೀಯ ಶುಭಾಶಯಗಳ ಮಹಾಪೂರ ಹರಿದುಬಂದಿದೆ. ಆಸ್ಟ್ರೇಲಿಯದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರು “ಲೇಬರ್ ಸೆನೆಟ್ ತಂಡದಲ್ಲಿ ನಿಮ್ಮನ್ನು ಹೊಂದುವುದು ಅದ್ಭುತ ಕ್ಷಣ” ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
“ಸೆನೆಟರ್ ಘೋಷ್ ಅವರು ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಆಸ್ಟ್ರೇಲಿಯಾದ ಸೆನೆಟರ್ ಆಗಿದ್ದಾರೆ. ನೀವು ಯಾವುದಾದರೂ ವಿಷಯದಲ್ಲಿ ಮೊದಲಿಗರಾದಾಗ, ನೀವು ಕೊನೆಯವರಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಾನು ಆಗಾಗ ಹೇಳುತ್ತಿದ್ದೆ. ಸೆನೆಟರ್ ಘೋಷ್ ಅವರು ತಮ್ಮ ಸಮುದಾಯಕ್ಕೆ ಮತ್ತು ಪಶ್ಚಿಮ ಆಸ್ಟ್ರೇಲಿಯನ್ನರಿಗೆ ಬಲವಾದ ಧ್ವನಿಯಾಗುತ್ತಾರೆ ಎಂದು ನನಗೆ ತಿಳಿದಿದೆ.” ಎಂದು ಆಸ್ಟ್ರೇಲಿಯದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಹೇಳಿದ್ದಾರೆ.
Indian origin Australian Senator Varun Ghosh took oath on Bhagavad Gita.
Proud of such Hindus who carry & flaunt our Dharma/culture with pride, even on foreign soils…🔥 pic.twitter.com/m7bha4rCYe
— Mr Sinha (@MrSinha_) February 6, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.