ಟೆಲ್ ಅವೀವ್: ಮಹತ್ವದ ಬೆಳವಣಿಗೆಯೊಂದರಲ್ಲಿ ಹಮಾಸ್ ಉಪನಾಯಕ ಸಲೇಹ್ ಅಲ್-ಅರೂರಿ ಮಂಗಳವಾರ ಬೈರುತ್ ನಲ್ಲಿ ಇಸ್ರೇಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಹತರಾಗಿದ್ದಾನೆ. ನಿನ್ನೆ ರಾತ್ರಿ ಲೆಬನಾನ್ನಲ್ಲಿ ಇಸ್ರೇಲ್ ತನ್ನ ಉಪ ಕಮಾಂಡರ್ ಸಲೇಹ್ ಅಲ್-ಅರೂರಿಯನ್ನು ಕೊಂದಿದೆ ಎಂದು ಭಯೋತ್ಪಾದಕ ಸಂಘಟನೆ ಹಮಾಸ್ ದೃಢಪಡಿಸಿದೆ.
“ಪ್ಯಾಲೆಸ್ಟೈನ್ನ ಒಳಗೆ ಮತ್ತು ಹೊರಗೆ ಪ್ಯಾಲೆಸ್ತೀನ್ ಜನ ನಾಯಕರು ಮತ್ತು ಸಂಕೇತಗಳ ವಿರುದ್ಧ ಝಿಯೋನಿಸ್ಟ್ ಆಕ್ರಮಣ ಮಾಡಿ ನಡೆಸಿದ ಹೇಡಿತನದ ಹತ್ಯೆಗಳು ನಮ್ಮ ಜನರ ಇಚ್ಛೆ ಮತ್ತು ದೃಢತೆಯನ್ನು ಮುರಿಯುವಲ್ಲಿ ಅಥವಾ ಧೀರತನದೊಂದಿಗೆ ಪ್ರತಿರೋಧವೊಡ್ಡುವುದನ್ನು ತಡೆಯುವಲ್ಲಿ ಯಶಸ್ವಿಯಾಗುವುದಿಲ್ಲ” ಎಂದು ಹಮಾಸ್ ಹಿರಿಯ ಅಧಿಕಾರಿ ಇಜ್ಜತ್ ಅಲ್-ರಿಶ್ಕ್ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಆದರೆ, ಹಿರಿಯ ಹಮಾಸ್ ನಾಯಕನನ್ನು ಕೊಂದ ಬಗ್ಗೆ ಇಸ್ರೇಲ್ ಇನ್ನೂ ಪ್ರತಿಕ್ರಿಯಿಸಿಲ್ಲ. ಏತನ್ಮಧ್ಯೆ, ಲೆಬನಾನ್ನ ನಿಯೋಜಿತ ಪ್ರಧಾನಿ ನಜೀಬ್ ಮಿಕಾಟಿ ಅವರು ಸಲೇಹ್ ಅಲ್-ಅರೂರಿಯ ಹತ್ಯೆಯನ್ನು ಖಂಡಿಸಿದ್ದಾರೆ.
ಹಮಾಸ್ನ ಉಪ ನಾಯಕನ ಹತ್ಯೆಗೆ ಪ್ರತಿಕ್ರಿಯಿಸಿ ನಜೀಬ್ ಮಿಕಾಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಇದನ್ನು “ಹೊಸ ಇಸ್ರೇಲಿ ಅಪರಾಧ” ಎಂದು ಕರೆದರು ಮತ್ತು ಟೆಲ್ ಅವಿವ್ ಲೆಬನಾನ್ ಅನ್ನು ಸಂಘರ್ಷಕ್ಕೆ ಎಳೆಯುವ ಗುರಿಯನ್ನು ಹೊಂದಿದೆ ಎಂದು ಎಚ್ಚರಿಕೆ ನೀಡಿದರು.
October 7th: Hamas deputy leader Saleh Al-Arouri (on the left, next to the flag) thanks Allah for Hamas' rape, beheading, mutilating, lynching, and burning of 1,200 Israeli civilians, and kidnapping of hundreds 👇
Today he was eliminated in Beirut 🎯 pic.twitter.com/J094gD8JnO
— Dr. Eli David (@DrEliDavid) January 2, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.