ನವದೆಹಲಿ: ಮಂಗಳವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಉತ್ಪಾದನೆ, ಗಣಿಗಾರಿಕೆ ಮತ್ತು ವಿದ್ಯುತ್ ವಲಯಗಳ ಉತ್ತಮ ಪ್ರದರ್ಶನದಿಂದಾಗಿ ಭಾರತದ ಕೈಗಾರಿಕಾ ಉತ್ಪಾದನೆಯು ಅಕ್ಟೋಬರ್ನಲ್ಲಿ 16 ತಿಂಗಳ ಗರಿಷ್ಠ 11.7 ಶೇಕಡಾಕ್ಕೆ ಏರಿಕೆಯನ್ನು ಕಂಡಿದೆ.
“ಭಾರತದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ದರವು ಅಕ್ಟೋಬರ್ 2023 ರಲ್ಲಿ 16 ತಿಂಗಳ ಗರಿಷ್ಠ ಶೇಕಡಾ 11.7 ಕ್ಕೆ ಏರಿದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
2022 ರ ಅಕ್ಟೋಬರ್ನಲ್ಲಿ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (IIP) ಪ್ರಕಾರ ಕೈಗಾರಿಕ ಉತ್ಪಾದನೆಯು ಶೇಕಡಾ 4.1 ರಷ್ಟು ಸಂಕುಚಿತಗೊಂಡಿತ್ತು, ಆದರೆ ಈ ಬಾರಿ ಬೆಳವಣಿಗೆಯನ್ನು ಕಂಡಿದೆ.
ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (NSO) ಬಿಡುಗಡೆ ಮಾಡಿದ ಅಂಕಿಅಂಶವು ಅಕ್ಟೋಬರ್ 2023 ರಲ್ಲಿ ಉತ್ಪಾದನಾ ವಲಯದ ಉತ್ಪಾದನೆಯು 10.4 ಪ್ರತಿಶತದಷ್ಟು ಬೆಳೆದಿದೆ ಎಂದು ತೋರಿಸಿದೆ. ಗಣಿಗಾರಿಕೆಯ ಉತ್ಪಾದನೆಯು ಅಕ್ಟೋಬರ್ ತಿಂಗಳಿನಲ್ಲಿ 13.1 ಶೇಕಡಾ ಏರಿಕೆಯಾಗಿದೆ. ವಿದ್ಯುತ್ ಉತ್ಪಾದನೆ ಶೇ.20.4ರಷ್ಟು ಏರಿಕೆಯಾಗಿದೆ.
2023 ರ ಏಪ್ರಿಲ್-ಅಕ್ಟೋಬರ್ನಲ್ಲಿ IIP 6.9 ಶೇಕಡಾ ಬೆಳವಣಿಗೆಯನ್ನು ಹೊಂದಿದ್ದು, ಒಂದು ವರ್ಷದ ಹಿಂದಿನ 5.3 ಶೇಕಡಾ ಬೆಳವಣಿಗೆಗೆ ಹೋಲಿಸಿದರೆ ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.