ವಾರಣಾಸಿ: ಕಾಶಿ ವಿಶ್ವನಾಥ ಧಾಮದಲ್ಲಿ ಭಕ್ತರಿಗೆ ಪ್ರವೇಶ ಮತ್ತು ಸೌಕರ್ಯಗಳನ್ನು ಹೆಚ್ಚಿಸುವ ಯೋಗಿ ಸರ್ಕಾರದ ಅಚಲ ಬದ್ಧತೆಯ ಪರಿಣಾಮವಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ, ಎರಡು ವರ್ಷಗಳಲ್ಲಿ 16,000 ಅಂತರಾಷ್ಟ್ರೀಯ ಪ್ರವಾಸಿಗರು ಸೇರಿದಂತೆ 13 ಕೋಟಿಗೂ ಹೆಚ್ಚು ಭಕ್ತರು ಕಳೆದ ಬಾರಿ ಪವಿತ್ರ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
ಕಾಶಿ ವಿಶ್ವನಾಥ ಧಾಮ ಮತ್ತು ವಿಶೇಷ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಿಲ್ ವರ್ಮಾ ಅವರು ಈ ಬಗ್ಗೆ ಮಾಹಿತಿ ನೀಡಿ, ಡಿಸೆಂಬರ್ 13, 2021 ರಿಂದ ಡಿಸೆಂಬರ್ 6, 2023 ರವರೆಗೆ 15,930 ವಿದೇಶಿ ಭಕ್ತರು ಪೂಜ್ಯ ವಿಶ್ವನಾಥ ದೇವಾಲಯದ ದರ್ಶನಕ್ಕಾಗಿ ಕಾಯ್ದಿರಿಸಿದ್ದಾರೆ ಎಂದಿದ್ದಾರೆ.
ಡಿಸೆಂಬರ್ 13, 2021 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜೀರ್ಣೋದ್ಧಾರಗೊಂಡ ಶ್ರೀ ಕಾಶಿ ವಿಶ್ವನಾಥ ದೇವಾಲಯದ ಉದ್ಘಾಟನೆ ನೆರವೇರಿಸಿದ ಬಳಿಕ, ಯಾತ್ರಾಸ್ಥಳವು ಅಭೂತಪೂರ್ವ ಭಕ್ತರ ಆಗಮನಕ್ಕೆ ಸಾಕ್ಷಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2022 ಕ್ಕೆ ಹೋಲಿಸಿದರೆ, 2023 ರ ಬುಕಿಂಗ್ ಸುಮಾರು ದ್ವಿಗುಣಗೊಂಡಿದೆ. ಕಾಶಿಯಲ್ಲಿ ಸಿಗುವ ಆಧ್ಯಾತ್ಮಿಕ ಅನುಭವಕ್ಕಾಗಿ ದೇಶೀಯ ಮತ್ತು ಅಂತರರಾಷ್ಟ್ರೀಯ ಭಕ್ತರು ಪುಳಕಿತರಾಗುತ್ತಿದ್ದಾರೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ಯಾತ್ರಾಸ್ಥಳವು ಧಾರ್ಮಿಕ ಪ್ರವಾಸೋದ್ಯಮದಲ್ಲಿ ಗಣನೀಯ ಹೆಚ್ಚಳಕ್ಕೆ ಸಾಕ್ಷಿಯಾಗಿದೆ, ಡಿಸೆಂಬರ್ 13, 2021 ರಿಂದ ಡಿಸೆಂಬರ್ 6, 2023 ರವರೆಗೆ 12 ಕೋಟಿ 92 ಲಕ್ಷದ 24 ಸಾವಿರ ಜನರು ಭೇಟಿ ನೀಡಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.