ನವದೆಹಲಿ: ಛತ್ತೀಸ್ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಸೋಲುಕಂಡ ಬಳಿಕ ಉತ್ತರ ಭಾರತವನ್ನು ಹೀಗೆಳೆಯುವುದನ್ನು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ನಿರಂತರ ಹವ್ಯಾಸವನ್ನಾಗಿ ಮಾಡಿಕೊಂಡಿವೆ. ತಮಿಳುನಾಡಿನ ಡಿಎಂಕೆಯ ಸಂಸದರೊಬ್ಬರು ಲೋಕಸಭೆಯಲ್ಲಿ ಉತ್ತರಭಾರತವನ್ನು “ಗೋ ಮೂತ್ರ ರಾಜ್ಯಗಳು” ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ಇದನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಉತ್ತರ ಭಾರತ ಮತ್ತು ಹಿಂದೂಗಳನ್ನು ಅವಮಾನಿಸುವುದು ಕಾಂಗ್ರೆಸ್ ಪಿತೂರಿ ಎಂದು ಆರೋಪಿಸಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಡಿಎಂಕೆ ಸಂಸದ ಡಿಎನ್ವಿ ಸೆಂಥಿಲ್ಕುಮಾರ್, ಬಿಜೆಪಿ ಗೋ ಮೂತ್ರ ರಾಜ್ಯಗಳಲ್ಲಿ ಮಾತ್ರ ಚುನಾವಣೆ ಗೆಲ್ಲುತ್ತದೆಯೇ ಹೊರತು ದಕ್ಷಿಣ ಭಾರತದಲ್ಲಿ ಅಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಹೃದಯಭಾಗದ ರಾಜ್ಯಗಳಲ್ಲಿನ ಅವರ ಚುನಾವಣಾ ಸೋಲು ಅವರ ದುರಹಂಕಾರವನ್ನು ನಾಶಪಡಿಸಿಲ್ಲ ಎಂದು ಹೇಳಿದ್ದಾರೆ. “ತಮ್ಮ ಇತ್ತೀಚಿನ ಸೋಲಿನ ನಂತರ ಅವರು ತುಚ್ಛವಾಗಿ ಮಾತನಾಡುವುದಕ್ಕೆ ಆರಂಭಿಸಿದ್ದಾರೆ. ಅವರು ಇವಿಎಂಗಳನ್ನುದೂಷಿಸುತ್ತಿದ್ದರು, ಆದರೆ ಅವರು ಈ ಬಾರಿ ಬಹಳ ಮುಂದಕ್ಕೆ ಹೋಗಿದ್ದಾರೆ. ನಮ್ಮ ದೇಶದ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಅಳಿಸಲು ಷಡ್ಯಂತ್ರವನ್ನು ರೂಪಿಸಲಾಗುತ್ತಿದೆ” ಎಂದಿದ್ದಾರೆ
ಅಮೇಠಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಲಿನೊಂದಿಗೆ ಇದು ಪ್ರಾರಂಭವಾಯಿತು. ಅವರು ತುಕ್ಡೆ ತುಕ್ಡೆ ಗ್ಯಾಂಗ್ನೊಂದಿಗೆ ನಿಂತಿದ್ದಾರೆ ಎಂದು ಹೇಳಿದರು.
ಆದರೆ ನಾವು ಅವರಿಗೆ ಈ ದೇಶವನ್ನು ವಿಭಜಿಸಲು ಬಿಡುವುದಿಲ್ಲ. ಅವರು ಹಿಂದೂ, ಹಿಂದಿ ಮತ್ತು ಸನಾತನ ಧರ್ಮವನ್ನು ಅವಮಾನಿಸಲು ಬಯಸುತ್ತಾರೆ. ಸೋಲು ಕಾಂಗ್ರೆಸ್ ಮತ್ತು ಅದರ ಘಮಂಡಿಯ ಮೈತ್ರಿಯ ದುರಹಂಕಾರವನ್ನು ಕೊನೆಗೊಳಿಸಲಿಲ್ಲ. ಉತ್ತರ ಭಾರತ ಮತ್ತು ಭಾರತೀಯರನ್ನು ಅವಮಾನಿಸಲು ತುದಿಗಾಲಲ್ಲಿ ನಿಂತಿದ್ದಾರೆ” ಎಂದು ಶ್ರೀ ಠಾಕೂರ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.