ನ್ಯೂಯಾರ್ಕ್: ಅಮೇರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಗ್ಲೋಬಲ್ ಸಿಟಿಜನ್ ಉತ್ಸವದಲ್ಲಿ ಮಿಶೆಲ್ ಒಬಾಮಾ ಅವರು ವಿಶ್ವದಾದ್ಯಂತ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಹೊಸ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಿಶೆಲ್ ಅವರು ಸೆಂಟ್ರಲ್ ಪಾರ್ಕ್ನಲ್ಲಿ 62 ಮಿಲಿಯನ್ ಹೆಣ್ಣು ಮಕ್ಕಳ ಪ್ರಚಾರ ಅಭಿಯಾನದ ಕುರಿತು ವಿವರಿಸಿದರು. ವಿಶ್ವಾದ್ಯಂತ ಪ್ರಯಾಣಿಸಿ ಶಿಕ್ಷಣವನ್ನು ಪಡೆಯುವ ಅವಕಾಶ ದೊರಕದ ಯುವತಿಯರನ್ನು ಭೇಟಿಯಾಗಿರುವುದಾಗಿ ಅವರು ತಿಳಿಸಿದರು.
’ನನಗೆ ನಿಜವಾಗಿಯೂ ಇದೊಂದು ನೈತಿಕ ವಿಷಯವಾಗಿದೆ. ಟ್ವ್ವಿಟರ್ನ ಹ್ಯಾಷ್ಟ್ಯಾಗ್ #62MillionGirls ಪ್ರೇಕ್ಷಕರು ತಮ್ಮ ಚಿತ್ರಗಳನ್ನು ಪೋಸ್ಟ್ ಮಾಡಿ ತಮ್ಮ ಶಾಲಾ ದಿನಗಳ ಅನುಭವವನ್ನು ಉಲ್ಲೇಖಿಸಿ. ಈ ಫೋಟೋಗಳು ಶಿಕ್ಷಣದ ಶಕ್ತಿಯನ್ನು ವಿವರಿಸುತ್ತದೆ. ಇದು ವಿಶ್ವಾದ್ಯಂತ ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತೆ ಉತ್ತೇಜಿಸಲು ನೆರವಾಗುತ್ತದೆ’ ಎಂದು ಅವರು ಮನವಿ ಮಾಡಿದರು.
ಈ 62 ಮಿಲಿಯನ್ ಬಾಲಕಿಯರು ಶಿಕ್ಷಣ ಪಡೆಯಲು ಎಲ್ಲಾ ಅವಕಾಶಗಳನ್ನು ಪಡೆಯಲು ಮುಂದಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.