ಬ್ಯಾಂಕಾಕ್: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೂ ಮುನ್ನ ರಾಮಜನ್ಮಭೂಮಿಗೆ ಸಾಂಸ್ಕೃತಿಕ ಮಹತ್ವ ತುಂಬುವ ನಿಟ್ಟಿನಲ್ಲಿ ಥಾಯ್ಲೆಂಡ್ ಮಣ್ಣನ್ನು ಕಳುಹಿಸಿಕೊಡಲಿದೆ
ಥೈಲ್ಯಾಂಡ್ನ ಈಗಾಗಲೇ ರಾಮ ಮಂದಿರಕ್ಕೆ ತನ್ನ ಎರಡು ನದಿಗಳ ನೀರನ್ನು ಕಳುಹಿಸಿಕೊಟ್ಟಿತ್ತು. ಇದರ ಅನುಸರಣೆಯಾಗಿ ಮಣ್ಣನ್ನು ಕಳುಹಿಸಿಕೊಡಲಿದೆ. ಈ ಅನನ್ಯ ಸಂಪರ್ಕವು ಥೈಲ್ಯಾಂಡ್ ಮತ್ತು ಭಾರತದ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ವಿಶ್ವ ಹಿಂದೂ ಫೌಂಡೇಶನ್ (WHF) ಸ್ಥಾಪಕ ಮತ್ತು ಜಾಗತಿಕ ಅಧ್ಯಕ್ಷರಾದ ಸ್ವಾಮಿ ವಿಜ್ಞಾನಾನಂದ್ ಅವರು ಹೇಳಿದ್ದಾರೆ.
ಜನವರಿ 22, 2024 ರಂದು ರಾಮಲಲ್ಲಾ ಪ್ರತಿಷ್ಠಾಪನಾ ಸಮಾರಂಭದ ತಯಾರಿಗಾಗಿ, ಥಾಯ್ಲೆಂಡ್ನಿಂದ ಮಣ್ಣನ್ನು ರಾಮ ಜನ್ಮಭೂಮಿಯ ಪವಿತ್ರ ಕ್ಷೇತ್ರಕ್ಕೆ ಕಳುಹಿಸಲಾಗುತ್ತಿದೆ. ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ವಿಎಚ್ಪಿಯ ಥಾಯ್ಲೆಂಡ್ ಘಟಕದ ಅಧ್ಯಕ್ಷ ಸುಶೀಲ್ಕುಮಾರ್ ಸರಾಫ್ ಅವರು ಇದರ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಸ್ವಾಮಿ ವಿಜ್ಞಾನಾನಂದ ಹೇಳಿದ್ದಾರೆ.
ಉಭಯ ರಾಷ್ಟ್ರಗಳ ಸಹಯೋಗವು ಮಣ್ಣಿಗೆ ಸೀಮಿತವಾಗಿಲ್ಲ ಎಂದು ಸ್ವಾಮಿ ವಿಜ್ಞಾನಾನಂದ ಹೇಳಿದ್ದಾರೆ. “ಭಾರತ ಮತ್ತು ಥಾಯ್ಲೆಂಡ್ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಾಂಧವ್ಯವನ್ನು ಹೊಂದಿವೆ. ಅಲ್ಲಿನ ರಾಜರು ಭಗವಾನ್ ರಾಮನ ವಂಶಸ್ಥರು. ಅಲ್ಲಿನ ಪ್ರತಿಯೊಬ್ಬ ರಾಜನೂ ಸಹ ಅವರ ಹೆಸರಿನಲ್ಲಿ ರಾಮನ ಬಿರುದನ್ನು ಹೊಂದಿದ್ದು, ಇದು ಇಲ್ಲಿನ ಹಳೆಯ ಸಂಪ್ರದಾಯವಾಗಿದೆ ಎಂದು ಅವರು ಹೇಳಿದರು.
ಏಷ್ಯಾದ ಆಗ್ನೇಯ ದೇಶವು ಶ್ರೀಮಂತ ಹಿಂದೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ, ಅದಕ್ಕಾಗಿಯೇ ಬ್ಯಾಂಕಾಕ್ನಲ್ಲಿ ವಿಶ್ವ ಹಿಂದೂ ಕಾಂಗ್ರೆಸ್ ಅನ್ನು ಆಯೋಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.